ಉಡುಪಿ: ನವೆಂಬರ್ 24 (ಹಾಯ್ ಉಡುಪಿ ನ್ಯೂಸ್) ಪಡಿತರ ವಿತರಕರೋರ್ವರು ಪಡಿತರ ವಿತರಣೆ ಮಾಡುವಾಗ ತಾರತಮ್ಯ ನಡೆಸಿದರು, ಪ್ರಶ್ನಿಸಿದ್ದಕ್ಕೆ ಬೈದು , ಅವಮಾನಿಸಿ ಹಲ್ಲೆ ನಡೆಸಲು ಬಂದರು ಎಂದು ವ್ಯಕ್ತಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪುತ್ತೂರು, ಶ್ರೀ ಬಬ್ಬುಸ್ವಾಮಿ ದೇವಸ್ಥಾನದ ಹತ್ತಿರ ,ಎನ್ ಹೆಚ್ 66, ಉಡುಪಿ ಇಲ್ಲಿಯ ನಿವಾಸಿ ಸತೀಶ್ ವಿ (42) ಇವರು ಸಹಕಾರಿ ವ್ಯವಸಾಯ ಬ್ಯಾಂಕ್ ಹೆರ್ಗ ಇದರ ಶಾಖಾ ಕಛೇರಿ ಅಂಬಾಗಿಲು ಇಲ್ಲಿಗೆ ಪ್ರತಿ ತಿಂಗಳಂತೆ ದಿನಾಂಕ 21/11/2022 ರಂದು ಬೆಳಿಗ್ಗೆ 11:30 ಗಂಟೆಗೆ ಪಡಿತರ ತರಲು ಪಡಿತರ ಅಂಗಡಿಗೆ ಹೋದಾಗ ಈಗ ಸಮಯವಿಲ್ಲ ಸಂಜೆ ಬನ್ನಿ ಎಂದು ಹೇಳಿದಂತೆ ಸತೀಶ ರವರು ಸಂಜೆ 4:15 ಗಂಟೆಗೆ ಹೋದಾಗ ಗ್ರಾಹಕರೊಬ್ಬರಿಗೆ ಟೋಕನ್ ನೀಡದೇ ಪಡಿತರ ಕೊಟ್ಟಾಗ ಯಾಕೆ ನಂತರ ಬಂದಿರುವವರಿಗೆ ಟೋಕನ್ ಇಲ್ಲದೇ ಕೊಡುತ್ತೀರಿ ಅವರು ಸಾಲಿನಲ್ಲಿ ನಿಲ್ಲಬೇಕಿತ್ತಲ್ಲ ಎಂದಾಗ ಪಡಿತರ ವಿತರಿಸುತ್ತಿದ್ದ ಸಚ್ಚೇಂದ್ರ ನಾಯಕ್ ಅವರು ಒಳಗಿನಿಂದ ಹೊರಗೆ ಬಂದು ಸತೀಶ್ ರವರನ್ನು ಹೊಡೆಯಲು ಬಂದುದಲ್ಲದೇ ಅವಾಚ್ಯವಾಗಿ ಬೈದಿದ್ದು , ಇನ್ನೋರ್ವ ಸಿಬ್ಬಂದಿ ಅಶ್ವಿನಿ ಶೆಟ್ಟಿ ಎಂಬವರು ಕೂಡಾ ಹೊರಗೆ ಬಂದು ಸತೀಶ್ ರವರ ಕೈಯಲ್ಲಿದ್ದ ರೇಶನ್ ಕಾರ್ಡನ್ನು ಕಸಿದುಕೊಂಡು ಸತೀಶ್ ರವರ ಮುಖಕ್ಕೆ ಕಾರ್ಡನ್ನು ಎಸೆದು ಸಾರ್ವಜನಿಕರ ಎದುರು ಹೀಯಾಳಿಸಿ ಬೈದು ಅವಮಾನ ಮಾಡಿರುತ್ತಾರೆ ಎಂದು ಸತೀಶ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .