- ಮಲ್ಪೆ: ನವೆಂಬರ್ 22 (ಹಾಯ್ ಉಡುಪಿ ನ್ಯೂಸ್) ಅಳಿಯನೋರ್ವ ತವರು ಮನೆಯಲ್ಲಿ ಆಶ್ರಯದಲ್ಲಿದ್ದ ಪತ್ನಿಗೆ ಹಾಗೂ ಮಾವನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- ಮಲ್ಪೆ ,ವಡಬಾಂಡೇಶ್ವರ , ಮಲ್ಪೆ ಬೀಚ್,ಬಳಿಯ ನಿವಾಸಿ ಸುಂದರ ಬಂಗೇರ (65) ರವರು ಮಲ್ಪೆ ಬೀಚ್ ರಸ್ತೆಯಲ್ಲಿ ಜನರಲ್ ಸ್ಟೋರ್ಸ್ ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಂಡಿದ್ದು. ಇವರ ಮಗಳಾದ ನಮಿತ ಎಂಬವರನ್ನು 10 ವರ್ಷಗಳ ಹಿಂದೆ ಮಲ್ಪೆ ಕೊಳ ನಿವಾಸಿ ಸತೀಶ್ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದು. ಸಂಸಾರಿಕ ಭಿನ್ನಾಭಿಪ್ರಾಯದಿಂದ ಸುಂದರ ಬಂಗೇರ ರವರ ಮಗಳು ನಮಿತಾ ಸುಂದರ ಬಂಗೇರರವರ ಮನೆಯಲ್ಲಿಯೇ ಇದ್ದು. ನಮಿತಾಳ ಗಂಡ ಸತೀಶನು ಶರಾಬು ಕುಡಿದು ಬಂದು ಸುಂದರ ಬಂಗೇರರ ಮನೆಯ ಬಳಿ ಜಗಳ ಮಾಡಿ ಈ ಹಿಂದೆ ಆತನ ವಿರುದ್ದ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎನ್ನಲಾಗಿದೆ.
- ದಿನಾಂಕ 20/11/2022 ರಂದು ಸುಂದರ ಬಂಗೇರರು ಅಂಗಡಿಯಲ್ಲಿ ಇರುವಾಗ ಮಗಳ ಗಂಡ ಸತೀಶನು ಸಂಜೆ 6:00 ಗಂಟೆ ಸಮಯಕ್ಕೆ ಅವರ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಸುಂದರ ಬಂಗೇರರಿಗೆ ಅವಾಚ್ಯ ಶಬ್ದಗಳಿಂದ ಬೈದು , ಅವರ ಮಗಳಿಗೂ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು ಆ ಸಮಯ ಸುಂದರ ಬಂಗೇರ ಹಾಗೂ ಸತೀಶನಿಗೆ ಮಾತಿನ ಚಕಮಕಿ ಆಗಿದ್ದು .ಸತೀಶನು ಸುಂದರ ಬಂಗೇರರ ಅಂಗಿಯ ಕಾಲರ್ ಗೆ ಕೈ ಹಾಕಿ ಕೈಯಿಂದ ಬೆನ್ನಿಗೆ ಗುದ್ದಿದ್ದು ಅಲ್ಲದೆ ದೂಡಿ ಹಾಕಿರುತ್ತಾನೆ. ಪರಿಣಾಮ ಸುಂದರ ಬಂಗೇರರಿಗೆ ಒಳ ನೋವು ಆಗಿರುತ್ತದೆ ಎಂದು ದೂರಿದ್ದಾರೆ.
- ಈ ಗಲಾಟೆಯ ವಿಚಾರ ತಿಳಿದ ಸುಂದರ ಬಂಗೇರರ ಮಗಳು ನಮಿತಾ ಅಲ್ಲಿಗೆ ಬಂದಾಗ ಅವಳಿಗೂ ಸತೀಶನು ಅವಾಚ್ಯ ಶಬ್ದಗಳಿಂದ ಬೈದು ಅವಳ ಜುಟ್ಟನ್ನು ಹಿಡಿದು ಬೆನ್ನಿಗೆ ಗುದ್ದಿದ್ದು ಅಲ್ಲದೆ ಸತೀಶನು, ಗಲಾಟೆಯನ್ನು ತಡೆಯಲು ಬಂದ ಸುಂದರ ಬಂಗೇರರ ಹೆಂಡತಿ ಲಲಿತಾ ರವರಿಗೂ ಹಲ್ಲೆ ಮಾಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
- ಗಲಾಟೆಯ ಸಮಯ ಸಾರ್ವಜನಿಕರು ಒಟ್ಟಾದ ಕಾರಣ ಸತೀಶನು ಅಲ್ಲಿಂದ ಹೋಗಿದ್ದು ಹೋಗುವಾಗ ಸುಂದರ ಬಂಗೇರರಿಗೂ ಅವರ ಮನೆಯವರಿಗೆ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಸುಂದರ ಬಂಗೇರ ಅವರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.