ಬೈಂದೂರು: ನವೆಂಬರ್ 15 (ಹಾಯ್ ಉಡುಪಿ ನ್ಯೂಸ್) ಉಡುಪಿ ಜಿಲ್ಲೆಯಲ್ಲಿ ಮಾದಕವಸ್ತುವನ್ನು ಮಾರಾಟ ಮಾಡಲು ಬಂದಿದ್ದ ಉತ್ತರ ಕರ್ನಾಟಕದ ವ್ಯಕ್ತಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ಪೊಲೀಸ್ ವ್ರತ್ತ ನಿರೀಕ್ಷಕರಾದ ಸಂತೋಷ ಎಂ ಕಾಯ್ಕಿಣಿ ಇವರಿಗೆ ದಿನಾಂಕ 14-11-2022 ರಂದು ಬೆಳಿಗ್ಗೆ ಪಡುವರಿ ಗ್ರಾಮದ ಒತ್ತಿನೆಣೆ ಬಳಿ ರಿಡ್ಜ್ ಕಾರು ನಂಬ್ರ KA-30-M-8382 ರಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡಲು ಬರುತ್ತಿರುವುದಾಗಿ ಗುಪ್ತ ಮಾಹಿತಿ ದಾರರಿಂದ ಬಂದ ವರ್ತಮಾನದ ಮೇರೆಗೆ ಪೊಲೀಸ್ ಸಿಬ್ಬಂದಿಯವರೊಂದಿಗೆ ಬೈಂದೂರು ತಾಲೂಕು ಪಡುವರಿ ಗ್ರಾಮದ ಒತ್ತಿನೆಣೆ ರಾಘವೇಂದ್ರ ಮಠದ ಸಮೀಪ ಸೆಳ್ಳೆಕುಳ್ಳಿ ಕಡೆಗೆ ಹೋಗುವ ಮಣ್ಣು ರಸ್ತೆಯಿಂದ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಪೊಲೀಸ್ ವಾಹನವನ್ನು ನಿಲ್ಲಿಸಿ ಕಾಯುತ್ತಿರುತ್ತಾರೆ.
ಮಾಹಿತಿ ಬಂದ ಸ್ಥಳಕ್ಕೆ ಬಿಳಿ ಬಣ್ಣದ ಮಾರುತಿ ರಿಡ್ಜ್ ಕಾರು ಬಂದು ನಿಲ್ಲುತ್ತದೆ. ಅದರಲ್ಲಿ 5 ಜನರಿದ್ದು, ಬೇರೆಯವರ ಬರುವಿಕೆಗಾಗಿ ಅವರು ಕಾಯುತ್ತಿರುವುದನ್ನು ಕಂಡು ಅವಿತು ಕುಳಿತಿದ್ದ ಪೊಲೀಸರು ದಾಳಿ ಮಾಡಿದಾಗ ಕಾರಿನಲ್ಲಿ ಇದ್ದವರು ಪರಾರಿಯಾಗಲು ಪ್ರಯತ್ನಿಸಿ, ಕಾರನ್ನು ಚಲಾಯಿಸಿದಾಗ ಕಾರು ಅಲ್ಲೇ ಇದ್ದ ಕಲ್ಲಿನಿಂದ ಕಟ್ಟಿದ ಪಾಗಾರಕ್ಕೆ ಗುದ್ದಿ ನಿಂತಿದ್ದು ಆ ಸಮಯ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಕಾರಿನಿಂದ ಇಳಿದು ಓಡಿ ಹೋಗುವಾಗ ಒಬ್ಬಾತನು ಕೈಯಲ್ಲಿದ್ದ ಬ್ಯಾಗನ್ನು ಬಿಸಾಡಿ ಓಡಿ ಹೋಗಿರುತ್ತಾನೆ. ಕಾರಿನಲ್ಲಿದ್ದ ಉಳಿದ ಮೂವರನ್ನು ವಶಕ್ಕೆ ಪಡೆದು ಹೆಸರು ವಿಳಾಸವನ್ನು ಪೊಲೀಸರು ವಿಚಾರಣೆ ನಡೆಸಿದಾಗ 1) ಮುಸ್ತಾಪ ಸಲೀಂ ಸಾಬ್ ಮುಸ್ತಾಫ್(28) , ಗುಳ್ಮೆ ಬಿಲಾಲ್‌ಖಂಡಾ ಭಟ್ಕಳ ತಾಲೂಕು ಉ.ಕ ಜಿಲ್ಲೆ, 2) ಸಮೀರ್‌ಸಾಬ್(22) , ಅಬೂಜರ್ ಕಾಲೋನಿ ಮಸೀದಿ ಹತ್ತಿರ ಬಿಲಾಲ್‌ಖಂಡಾ ಭಟ್ಕಳ ತಾಲೂಕು ಉ.ಕ ಜಿಲ್ಲೆ, 3) ಮೊಹಮ್ಮದ್ ಫೈಝಲ್(22), ವಾಸ: ಜನತಾ ಕಾಲೋನಿ ಮೂಡುಗೋಪಾಡಿ ಗೋಪಾಡಿ ಗ್ರಾಮ ಕುಂದಾಪುರ ನಿವಾಸಿ ಗಳು ಎಂದು ತಿಳಿಸಿದ್ದು ಓಡಿ ಹೋದವರ ಹೆಸರು ವಿಚಾರಿಸಿದಾಗ ಅಲ್ಫಾಜ್ ಹಾಗೂ ಸುಹೈಲ್ ಎಂಬುವುದಾಗಿ ತಿಳಿಸಿರುತ್ತಾರೆ.
ವಶಕ್ಕೆ ಪಡೆದ ಮೂವರಿಂದ MDMA ಮಾದಕ ವಸ್ತು ಇರುವ 2 ಕವರನ್ನು ಹಾಗೂ ಸೊತ್ತನ್ನು ಮಾರಾಟ ಮಾಡಲು ಉಪಯೋಗಿಸುವ ಪ್ಲಾಸ್ಟಿಕ್ ಕವರ್ 21, Realme Mobile Phone-1, iPhone-1, Vivo Mobile -1 ಹಾಗೂ KA-30-M-8382 ರಿಡ್ಜ್‌ಕಾರನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಕಾರಿನ ಒಳಭಾಗದಲ್ಲಿ Vivo Mobile -1 ಇದ್ದು, ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿದ 6 ಇಂಚು ಉದ್ದದ ಮರದ ಹಿಡಿ ಇರುವ 20 ಇಂಚು ಉದ್ದದ ಕಬ್ಬಿಣದ ತಲ್ವಾರ್ ಇದ್ದು, ಇವುಗಳನ್ನು ಸ್ವಾಧೀನ ಪಡಿಸಿಕೊಂಡಿರುತ್ತಾರೆ
ಸ್ಥಳದಲ್ಲಿ ಓಡಿ ಹೋದ ಆಪರಾಧಿಗಳು ಬಿಸಾಡಿ ಹೋದ ಕಂದು ಬಣ್ಣದ ಸ್ಲಿಂಗ್ ಬ್ಯಾಗ್ ನಲ್ಲಿ MDMA ಮಾದಕ ವಸ್ತು ಇರುವ ಕವರ್ ಇದ್ದು ಅದರಲ್ಲಿ iPhone-12 Pro ಮೊಬೈಲ್ ಹಾಗೂ ವೆಯಿಂಗ್ ಮಿಷನ್ ಇದ್ದು ಇವುಗಳನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ.ಪೊಲೀಸರು ಸ್ವಾಧೀನ ಪಡಿಸಿಕೊಂಡ MDMA ಮಾದಕ ವಸ್ತು ಇರುವ 3 ಪ್ಯಾಕೇಟ್‌ಗಳ ತೂಕ ಒಟ್ಟು 35.78 ಗ್ರಾಂ ಆಗಿದ್ದು ,ಇದರ ಮೌಲ್ಯ 70,000/- ಆಗಿರುತ್ತದೆ ಎಂದು ಅಂದಾಜಿಸಲಾಗಿದೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,71000/- ಆಗಿರುತ್ತದೆ ಎಂದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್‌ಕಾಯ್ದೆ & ಕಲಂ: 4,25(1ಬಿ)ಬಿ ಭಾರತೀಯ ಶಸ್ತ್ರಾಸ್ತ್ರ ಅಧಿನಿಯಮದಂತೆ ಪ್ರಕರಣ ದಾಖಲಾಗಿರುತ್ತದೆ .