ಪಡುಬಿದ್ರಿ: ನವೆಂಬರ್ 8(ಹಾಯ್ ಉಡುಪಿ ನ್ಯೂಸ್) ಕೆಲಸಕ್ಕೆ ತೆರಳುತ್ತಿದ್ದ ಅಂಗನವಾಡಿ ಶಾಲಾ ಶಿಕ್ಷಕಿಯೋರ್ವರ ಕರಿಮಣಿ ಸರವನ್ನು ದ್ವಿಚಕ್ರ ವಾಹನದಲ್ಲಿ ಬಂದ ಕಳ್ಳರೀರ್ವರು ಎಳೆದುಕೊಂಡು ಹೋದ ಘಟನೆ ಇನ್ನಾ ಗ್ರಾಮದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಹೊಸಕಾಡು ನಿವಾಸಿ ಶ್ರೀಮತಿ ರೇಖಾ (40)ಇವರು ಕಾರ್ಕಳ ತಾಲೂಕು ಇನ್ನಾ ಗ್ರಾಮದ ಕುರ್ಕಿಲಬೆಟ್ಟುವಿನ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ 08/11/2022 ರಂದು ಬೆಳಗ್ಗೆ 09:00 ಗಂಟೆಗೆ ಸ್ಕೂಟಿಯಲ್ಲಿ ಮನೆಯಿಂದ ಅಂಗನವಾಡಿಗೆ ಇನ್ನಾ ಹೊಸಕಾಡು ರಸ್ತೆಯಲ್ಲಿ ಹೋಗುತ್ತಿದ್ದಾಗ 09:15 ಗಂಟೆಯ ವೇಳೆಗೆ ಎಲಿಜಾ ಕ್ರಾಸ್ತ ಎಂಬುವವರ ಹಾಡಿಯ ಜಾಗದ ಬಳಿ ತಲುಪಿದಾಗ, ಕಪ್ಪು ಬಣ್ಣದ ಮೋಟಾರ್ ಸೈಕಲ್ಲಿನಲ್ಲಿ ಬಂದಿದ್ದ ಇಬ್ಬರು ಯುವಕರಲ್ಲಿ ಸವಾರನು ಹೆಲ್ಮೆಟ್ ಧರಿಸಿ ಮೋಟಾರ್ ಸೈಕಲ್ ಮೇಲೆ ಕುಳಿತಿದ್ದು, ಹಿಂಬದಿ ಸವಾರನು ಶ್ರೀಮತಿ ರೇಖಾ ರವರನ್ನು ನಿಲ್ಲಿಸಿ, ಒಂದು ಚೀಟಿ ತೋರಿಸುತ್ತಾ, ವಿಳಾಸ ಕೇಳುವ ನೆಪದಲ್ಲಿ ರೇಖಾರವರ ಬಳಿ ಬಂದು ಅವರ ಕುತ್ತಿಗೆಗೆ ಕೈಹಾಕಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 32 ಗ್ರಾಮ್ (4 ಪವನ್) ತೂಕದ ಎರಡು ಎಳೆಯ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಮೋಟಾರ್ ಸೈಕಲ್ಲಿನಲ್ಲಿ ಪರಾರಿಯಾಗಿರುತ್ತಾನೆ ಎಂದು ಶ್ರೀಮತಿ ರೇಖಾ ರವರು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಿತ್ತುಕೊಂಡು ಹೋದ ಚಿನ್ನದ ಕರಿಮಣಿ ಸರದ ಬೆಲೆ 1,44,000/- ರೂಪಾಯಿ ಆಗಿರುತ್ತದೆ ಎಂದು ದೂರಿದ್ದಾರೆ . ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .