ಮಲ್ಪೆ: ನವೆಂಬರ್ 8 ( ಹಾಯ್ ಉಡುಪಿ ನ್ಯೂಸ್) ವರ್ಗೀಸ್ ಪಿ(56) ಇವರು ಮಲ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದು ದಿನಾಂಕ 05/11/2022 ರಂದು ಮಧ್ಯಾಹ್ನ 1:00 ಗಂಟೆಗೆ ಕಾಲೇಜಿನ ಕೊಠಡಿಗಳಿಗೆ ಬೀಗ ಹಾಕಿ ಹೋಗಿದ್ದು, ದಿನಾಂಕ 07/11/2022 ರಂದು ಬೆಳಿಗ್ಗೆ 9:00 ಗಂಟೆಗೆ ಕಾಲೇಜಿಗೆ ಬಂದು ನೋಡುವಾಗ ಕಾಲೇಜಿನ ಪ್ರಾಚಾರ್ಯರ ಕೊಠಡಿ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮುರಿದು ಒಳ ಪ್ರವೇಶಿಸಿ ಕಪಾಟಿನ ಬೀಗ ಮುರಿದು ಕಪಾಟಿನ ಒಳಗೆ ಇದ್ದ ಸರ್ಕಾರದಿಂದ ಜಿಲ್ಲಾ ಮಟ್ಟದ ಉತ್ತಮ ಪಲಿತಾಂಶಕ್ಕಾಗಿ ಕೊಟ್ಟ 10 ಗ್ರಾಂ ಚಿನ್ನದ ಪದಕ ಮತ್ತು 5 ಗ್ರಾಂ ಚಿನ್ನದ ಪದಕ ಹಾಗೂ ಕಛೇರಿಯ ಕಪಾಟಿನಲ್ಲಿರುವ 5100 ನಗದು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿದ್ದಾರೆ. ಕಳವು ಮಾಡಿಕೊಂಡು ಹೋಗಿರುವ ವಸ್ತುವಿನ ಒಟ್ಟು ಮೌಲ್ಯ ರೂಪಾಯಿ 75,100/- ಅಗಿರುತ್ತದೆ. ಅಲ್ಲದೇ ಕಾಲೇಜಿನ ಕಂಪೌಂಡಿನ ಒಳಗೆ ಇರುವ ಸರ್ಕಾರಿ ಪ್ರೌಡಶಾಲಾ ವಿಭಾಗದ ಮುಖ್ಯೋಪಾದ್ಯಾಯರ ಕೊಠಡಿ ಮತ್ತು ಕಛೇರಿಯ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.