ಪೂನಾ: ನವೆಂಬರ್ 1 (ಹಾಯ್ ಉಡುಪಿ ನ್ಯೂಸ್)ಮಹಾರಾಷ್ಟ್ರದ ಪೂನಾ ಲುಲ್ಲಾ ನಗರ ಚೌಕದ ಮಾರ್ವೆಲ್ ವಿಸ್ಟಾ ಕಟ್ಟಡದಲ್ಲಿ ಮಂಗಳವಾರ ಬೆಳಿಗ್ಗೆ 8-45ಕ್ಕೆ ಬೆಂಕಿ ಕಾಣಿಸಿಕೊಂಡಿದೆ.
ಕೆಲವೇ ಹೊತ್ತಿನಲ್ಲಿ ಬೆಂಕಿಯ ಕೆನ್ನಾಲಗೆ ಕಟ್ಟಡದ ಕೊನೆಯ ಮಾಳಿಗೆಯನ್ನು ಆವರಿಸಿದ್ದು ಬೆಂಕಿಯ ಕೆನ್ನಾಲಗೆಗೆ ಹೊತ್ತಿ ಉರಿದ ಕಟ್ಟಡದ ಗಾಜುಗಳು ಸುತ್ತ ಮುತ್ತಲೂ ಸಿಡಿದು ಕೆಳಗೆ ಬೀಳುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರು ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸಲು ಯತ್ನಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೋಟೆಲ್ ನ ಒಳಗೆ ಹೊತ್ತಿಕೊಂಡ ಬೆಂಕಿ ಇಡೀ ಕಟ್ಟಡವನ್ನೇ ಆವರಿಸಿದ್ದು ಸಂಪೂರ್ಣ ಕಟ್ಟಡವೇ ಭಸ್ಮ ವಾಗಿದ್ದು ಇದುವರೆಗೆ ಯಾವುದೇ ಜೀವ ಹಾನಿಯ ಬಗ್ಗೆ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.