ಹಾಯ್ ಉಡುಪಿ (ಸಿನೆಮಾ ಸ್ಪೆಷಲ್) ಬಾಲಿವುಡ್ ಸಿನಿಮಾ ರಂಗದಲ್ಲಿ ಅಮೀರ್ ಖಾನ್, ಶಾರೂಖ್ ಖಾನ್ ಗಳು ಮಿಂಚುತ್ತಿದ್ದ ಕಾಲವದು. 1997 ರ ಅಕ್ಟೋಬರ್ 30 ರಂದು ತೆರೆಗೆ ಬಂದಿದ್ದ ಶಾರುಕ್ ಖಾನ್, ಮಾಧುರಿ ದೀಕ್ಷಿತ್ ಮತ್ತು ಕರೀಷ್ಮಾ ಕಪೂರ್, ಅಕ್ಷಯ್ ಅಭಿನಯದ ತ್ರಿಕೋನ ಪ್ರೇಮ ಕಥೆ ಯಾಧಾರಿಸಿದ ಚಿತ್ರ ದಿಲ್ ತೊ ಪಾಗಲ್ ಹೈ ಆಗ ಒಂದು ಇತಿಹಾಸವನ್ನೇ ಸ್ರಷ್ಟಿಸಿತ್ತು. ಶಾರೂಖ್ ಖಾನ್ ಈ ಚಿತ್ರದಿಂದಲೇ ಲವರ್ ಬಾಯ್ ಆಗಿ ಬೆಳೆದು ಬಿಟ್ಟ.
ಇಂದಿಗೆ ಈ ಚಿತ್ರ ತೆರೆಗೆ ಬಂದು ಬರೋಬ್ಬರಿ 25 ವರ್ಷ ವಾಗಿದೆ. ಆದರೆ ಇಂದಿಗೂ ಪ್ರೇಮಿಗಳು ಬಾಯಲ್ಲಿ ,ಮನದಲ್ಲಿ ಈ ಚಿತ್ರದ ಹಾಡುಗಳನ್ನು ಹಾಡಲು ಮರೆಯುವುದಿಲ್ಲ.ಈ ಚಿತ್ರದ ಹಾಡುಗಳು ಈಗಲೂ ಕಿವಿಯಲ್ಲಿ ಗುಂಯ್ ಎನ್ನುತ್ತವೆ. ಆ ಕಾಲದಲ್ಲೇ 60 ಕೋಟಿ ಗಳಿಸಿ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿತ್ತು ಈ ಚಿತ್ರ.ಯಶ್‌ರಾಜ್ ಫಿಲಂಸ್ ಬ್ಯಾನರ್‌ನಲ್ಲಿ ದಿವಂಗತ ಯಶ್ ಚೋಪ್ರಾ ನಿರ್ಮಿಸಿ, ನಿರ್ದೇಶಿಸಿದ್ದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳಿಪಟವೆಬ್ಬಿಸಿತ್ತು.ಇಂತಹ ಹಿಟ್ ಚಿತ್ರ ತೆರೆಗೆ ಬಂದು ಇಂದಿಗೆ 25 ವರ್ಷ ಪೂರ್ಣಗೊಂಡಿದೆ.
ದಿಲ್ ತೊ ಪಾಗಲ್ ಹೈ’ ಚಿತ್ರದ ಹಾಡುಗಳು ಇಂದಿಗೂ ಚಿರಪರಿಚಿತ. ಶಾರುಕ್ ಖಾನ್ ಎಂಬ ಕೋಲು ಮುಖದ ನಟನನ್ನು ಇನ್ನೂ ಎತ್ತರಕ್ಕೆ ಏರಿಸಿದ ಚಿತ್ರವಿದು. ತ್ರಿಕೋನ ಪ್ರೇಮ ಕಥೆಗೊಂದು ಮಾದರಿ ಎನ್ನುವಂತಹ ಚಿತ್ರವಿದು. ಪ್ರೀತಿ ಎಂಬುದು ವ್ಯಕ್ತಿಯನ್ನು ಇಷ್ಟಪಡುವುದು ಮಾತ್ರವಲ್ಲ. ಅವರನ್ನು ಮರೆತುಬಿಡಲು ಬರಬೇಕು ಎಂಬ ಪಾಠವನ್ನು ಕಲಿಸುವ ಚಿತ್ರವಾಗಿದೆ.