ಪಡುಬಿದ್ರಿ: ಅಕ್ಟೋಬರ್ 29(ಹಾಯ್ ಉಡುಪಿ ನ್ಯೂಸ್) ಮುದರಂಗಡಿಯ ಸರ್ಕಾರಿ ಪ್ರೌಢಶಾಲೆಗೆ ಕಳ್ಳರು ನುಗ್ಗಿ ಹಣಕ್ಕಾಗಿ ಹುಡುಕಾಡಿ ಹಣ ಸಿಗದೆ ದಾಖಲೆ ಗಳನ್ನು ಚೆಲ್ಲಾಪಿಲ್ಲಿ ಮಾಡಿರುವ ಘಟನೆ ನಡೆದಿದೆ.
ಕಾಪು ತಾಲೂಕು ಸಾಂತೂರು ಗ್ರಾಮದ ಮುದರಂಗಡಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯೋಪಾದ್ಯಾಯಿನಿ ಆಗಿರುವ ಪುಷ್ಪಾವತಿ (51) ರವರು ದಿನಾಂಕ 28/10/2022 ರಂದು ಸಂಜೆ 5:00 ಗಂಟೆಗೆ ತರಗತಿ ಮುಗಿಸಿ ಎಲ್ಲಾ ಕೊಠಡಿ ಮತ್ತು ಶಾಲಾ ಕಛೇರಿಗೆ ಬೀಗ ಹಾಕಿ ಹೋಗಿದ್ದು, ಯಾರೋ ಕಳ್ಳರು 28/10/2022 ರಂದು ರಾತ್ರಿ ಯ ಸಮಯದಲ್ಲಿ ಯಾವುದೋ ಆಯುಧದಿಂದ ಶಾಲಾ ಕಛೇರಿಯ ಎದುರಿನ ಬಾಗಿಲಿನ ಬೀಗವನ್ನು ಮುರಿದು ಬಾಗಿಲನ್ನು ತೆರೆದು ಶಾಲೆಯ ಒಳ ಪ್ರವೇಶಿಸಿ, ಒಳಗಿದ್ದ ಕಪಾಟುಗಳ ಬೀಗವನ್ನು ಮುರಿದಿದ್ದು, ಬಾಗಿಲು ತೆರೆದು ಹಣಕ್ಕಾಗಿ ಜಾಲಾಡಿಸಿ ಕಪಾಟಿನಲ್ಲಿದ್ದ ದಾಖಲೆಗಳು, ಕಾಗದಪತ್ರ ಮತ್ತು ಸ್ವತ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳವಿಗೆ ಪ್ರಯತ್ನಿಸಿರುತ್ತಾರೆ. ಆದರೆ ಯಾವುದೇ ವಸ್ತುಗಳು ಕಳವಾಗಿರುವುದಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದು ,ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .