ಹಿರಿಯಡ್ಕ: ಅಕ್ಟೋಬರ್ 29 (ಹಾಯ್ ಉಡುಪಿ ನ್ಯೂಸ್) ತಾಯಿ ಮನೆಯ ಆಸ್ತಿಯ ವಿಚಾರದಲ್ಲಿ ಜಗಳವಾಗಿ ತಮ್ಮನೋರ್ವ ದೊಣ್ಣೆಯಿಂದ ಒಡ ಹುಟ್ಟಿದವರಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕಾರ್ಕಳ ತಾಲೂಕು,ಮುನಿಯಾಲು, ಮರ್ಣೆ ಗ್ರಾಮದ ಕಾಡುಹೊಳೆ ನಿವಾಸಿ ಸುನೀತಾ (37) ಎಂಬವರು ದಿನಾಂಕ 26/10/2022 ರಂದು ದೀಪಾವಳಿ ಹಬ್ಬದ ಪ್ರಯುಕ್ತ ತನ್ನ ತಾಯಿ ಮನೆಯಾದ ಗೋರೆಲ್ ಹೌಸ್ , ಪೆರ್ಡೂರು ಇಲ್ಲಿಗೆ ಬಂದಿದ್ದು, ತನ್ನ ಇನ್ನೊಬ್ಬ ಅಣ್ಣ ನವೀನ ಮತ್ತು ಆತನ ಹೆಂಡತಿ ಮಕ್ಕಳು ಕೂಡ ತಾಯಿ ಮನೆಗೆ ಬಂದಿದ್ದು, ಸುನೀತಾರವರ ಎರಡನೆ ಅಣ್ಣನಾದ ಸದಾಶಿವ ಎಂಬುವವರು ತಾಯಿ ಹೆಸರಿನಲ್ಲಿರುವ ಅಸ್ತಿಯ ಬಗ್ಗೆ ಸುನೀತಾರವರೊಂದಿಗೆ ಯಾವಾಗಲೂ ಜಗಳವಾಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ,
ಆದೇ ದಿನ ಸಮಯ 2:30 ಗಂಟೆಯ ಹೊತ್ತಿಗೆ ಸುನೀತಾ ರವರ ಇನ್ನೊಬ್ಬ ಅಣ್ಣ ನವೀನ ಎಂಬವರ ಹೆಂಡತಿಗೆ ಸದಾಶಿವ ಬೈದಿದ್ದು ಈ ಬಗ್ಗೆ ಸುನೀತಾ ರವರು ,ಹಾಗೂ ಅವರ ಅಣ್ಣ ನವೀನ, ಮತ್ತು ಅಕ್ಕ ಅನಿತಾ ರವರು ಸದಾಶಿವನನ್ನು ಬೈದ ಬಗ್ಗೆ ಪ್ರಶ್ನಿಸಿದಾಗ ಅತನು ಒಂದು ದೊಣ್ಣೆಯನ್ನು ಹಿಡಿದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ಎಲ್ಲರಿಗೂ ಬೈದು ಸುನೀತಾ ರವರಿಗೆ ಹಾಗೂ ಅವರ ಅಣ್ಣ ನವೀನ , ಅಕ್ಕ ಅನಿತಾ ರವರಿಗೂ ಹೊಡೆದಿರುತ್ತಾನೆ. ಅಲ್ಲದೆ ಕಾಲಿನಿಂದ ತುಳಿದಿರುತ್ತಾನೆ. ಈ ಹಲ್ಲೆಯ ಪರಿಣಾಮ ಸುನೀತಾರವರಿಗೆ ತಲೆಗೆ ಕೈಗಳಿಗೆ ಗಾಯವಾಗಿದ್ದು, ನವೀನರಿಗೆ ಗದ್ದಕ್ಕೆ ,ಬೆನ್ನಿಗೆ ಒಳಜಖಂ ಆಗಿರುತ್ತದೆ, ಅನಿತಾಳಿಗೆ ಬಲಕಣ್ಣಿಗೆ , ಕೈಗೆ ಒಳ ಜಖಂ ಆಗಿದ್ದು ಈ ಬಗ್ಗೆ ಚಿಕಿತ್ಸೆ ಪಡೆದಿದ್ದು ಅವರು ನೀಡಿದ ಹಲ್ಲೆ ಯ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .