Spread the love
  • ಹಿರಿಯಡ್ಕ: ಅಕ್ಟೋಬರ್ 22 (ಹಾಯ್ ಉಡುಪಿ ನ್ಯೂಸ್) ಸ್ನೇಹಿತನಿಂದ ಸಾಲ ಪಡೆದು ಸಾಲದ ಹಣ ಸ್ನೇಹಿತ ವಾಪಾಸು ಕೇಳಿದಾಗ ಹಣ ವಾಪಾಸು ನೀಡದೆ ನಂಬಿಕೆ ದ್ರೋಹ ಮಾಡಿ ಚಾಣಾಕ್ಷ ತನದಿಂದ ಸಾಲ ನೀಡಿದ ತಪ್ಪಿಗಾಗಿ ಸ್ನೇಹಿತನನ್ನೇ ಪಾಪಿಯೋರ್ವ ಗಲ್ಲಿಗೇರಿಸಿದಂತಹ ಘಟನೆ ಹಿರಿಯಡ್ಕ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
  • ಪಡುಕಟ್ಟೆ ದರ್ಖಾಸು, ಬಜೆ, ಕುಕ್ಕೆಹಳ್ಳಿ ಗ್ರಾಮದ ನಿವಾಸಿ ಕೃತಿಕ್ ಜೆ ಸಾಲಿಯಾನ್(22)  ಎಂಬವರು ದಿನಾಂಕ 14-09-2022ರಂದು ಮನೆ ಸಮೀಪದ ನಿರ್ಜನ ಹಾಡಿಯೊಂದರಲ್ಲಿ ನೇಣು  ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ  ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿತ್ತು. 
  • ದಿನಾಂಕ 18/09/2022 ರಂದು ಮೃತ ಕೃತಿಕನ ಸೋದರತ್ತೆ ಸಂಗೀತಾ ಸಾಲಿಯಾನ್ ಎಂಬುವವರು ಕೃತಿಕ್ ಜೆ ಸಾಲಿಯಾನ್ ನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು ;ಇದು ಆತ್ಮಹತ್ಯೆ ಅಲ್ಲ ,ಇದು ಕೊಲೆ, ಈ ಕೊಲೆಯನ್ನು ದಿನೇಶ್ ಸಫಲಿಗ ಎಂಬುವವನೇ ನಡೆಸಿದ್ದಾನೆ ಎಂದು ಸಂಶಯ ವ್ಯಕ್ತಪಡಿಸಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರವರಿಗೆ ಪ್ರತ್ಯೇಕ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು.
  • ದಿನಾಂಕ 21/10/2022 ರಂದು ದಿನೇಶ ಸಫಲಿಗನನ್ನು ಠಾಣೆಗೆ ಕರೆಯಿಸಿ ದೂರುದಾರರ ಉಪಸ್ಥಿತಿಯಲ್ಲಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ  ದಿನೇಶ್ ಸಫಲಿಗನು ಕೃತಿಕಾನಿಂದ ಸುಮಾರು 13 ಲಕ್ಷಕ್ಕಿಂತ ಹೆಚ್ಚಿನ
  • ಹಣವನ್ನು ಯಾವುದೇ ದಾಖಲೆ ಇಲ್ಲದೆ ಪಡೆದುಕೊಂಡಿರುವ ಬಗ್ಗೆ ಬಾಯಿ ಬಿಟ್ಟಿರುತ್ತಾನೆ. ಈ ದೊಡ್ಡ ಮೊತ್ತದ ಹಣವನ್ನು ಹಿಂದಿರುಗಿಸದೇ ವಂಚಿಸುವ ಉದ್ದೇಶದಿಂದ ಕೃತಿಕನನ್ನು ಕೊಲೆ ಮಾಡುವ ಸಂಚು ಮಾಡಿರುವ ಬಗ್ಗೆ ಪೊಲೀಸರ ಮುಂದೆ ಒಪ್ಪಿಕೊಳ್ಳುತ್ತಾನೆ.
  • ಮಾನಸಿಕವಾಗಿ ಪುಕ್ಕಲನಾಗಿದ್ದ ಕೃತಿಕನ ಮನೋದೌರ್ಬಲ್ಯ ತಿಳಿದಿದ್ದ ದಿನೇಶ್ ಸಫಲಿಗ ಅದನ್ನು ಉಪಯೋಗಿಸಿಕೊಂಡು ಚಾಣಾಕ್ಷತನದಿಂದ ಕೃತಿಕನ ಕೈ ಬರಹದಲ್ಲೇ ಯಾರೋ ಶಾರದ ಎಂಬ ಹೆಂಗಸಿನ ಹೆಸರಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆಯಿಸಿದ್ದಲ್ಲದೆ, ಅತ್ಮಹತ್ಯೆಯ ಅಣಕು ವಿಡಿಯೋವನ್ನು ಮಾಡಿ ಆ ಹೆಂಗಸಿಗೆ ಕಳುಹಿಸೋಣ, ಆಗ ಆಕೆಯು ಹೆದರಿ ನಿನ್ನನ್ನು ಖಂಡಿತ ಒಪ್ಪಿಕೊಳ್ಳುತ್ತಾಳೆ ಎಂದು ಮಾತಿನಿಂದ ನಂಬಿಸಿ, ದಿನಾಂಕ 14/09/2022  ರಂದು ಮನೆಯ ಹತ್ತಿರ ದ ಜನ ಸಂಚಾರ ಇಲ್ಲದ ಹಾಡಿಗೆ ಬೆಳಿಗ್ಗೆ 4:45  ರ ಸಮಯಕ್ಕೆ ಕ್ರತಿಕನನ್ನು ಬರಲು ಹೇಳಿ ಅಲ್ಲಿಗೆ ಕ್ರತಿಕನು ಬಂದಾಗ ದಿನೇಶ ಸಫಲಿಗನೇ ಕುಣಿಕೆ ಹಗ್ಗವನ್ನು ದೂಪದ ಮರದ ಕೊಂಬೆಗೆ ಕಟ್ಟಿ ಕುಣಿಕೆಯನ್ನು ಕೃತಿಕನಿಗೆ ಕುತ್ತಿಗೆಗೆ ಹಾಕಿಕೊಳ್ಳುವಂತೆ ತಿಳಿಸುತ್ತಾನೆ.
  • ಕೊಲೆ ಮಾಡುವ ಉದ್ದೇಶದಿಂದಲೇ ಕುಣಿಕೆಯನ್ನು ಬೇಕಂತಲೇ ಎತ್ತರದಲ್ಲಿ ಕಟ್ಟಿ ಇದ್ದುದರಿಂದ ಕೃತಿಕನ ಕಾಲಿನ ಬಳಿ ಒಂದು ಶಿಲೆಕಲ್ಲನ್ನು ಇಟ್ಟು ಅದರ ಮೇಲೆ ನಿಂತು ಆತ್ಮಹತ್ಯೆ ಯ ನಟನೆ ಮಾಡು ನಾನು ವೀಡಿಯೋ ಮಾಡುತ್ತೇನೆ ಎಂದು ನಂಬಿಸಿ ಕ್ರತಿಕನನ್ನು ಕಲ್ಲಿನ ಮೇಲೆ ಹತ್ತಿಸಿ, ಕೃತಿಕನನ್ನು ಎತ್ತಿ ಕುತ್ತಿಗೆಗೆ ಕುಣಿಕೆಯನ್ನು ಹಾಕಿಕೊಳ್ಳುವಂತೆ ಮಾಡುತ್ತಾನೆ. ಕೃತಿಕನನ್ನು ಎತ್ತಿದ ಕೈಗಳನ್ನು ದಿನೇಶ್ ಸಫಲಿಗ ಒಮ್ಮೇಲೆ ಬಿಟ್ಟು ಬಿಡುತ್ತಾನೆ. ದಿನೇಶ್ ಸಫಲಿಗ ಕೈ ಬಿಟ್ಟ ಕೂಡಲೇ ಕ್ರತಿಕನ ಕುತ್ತಿಗೆಗೆ ಕುಣಿಕೆಯ ಹಗ್ಗ ಬಿಗಿದುಕೊಂಡಿದ್ದು ಹಗ್ಗದಲ್ಲಿ ಕೈಯಿಂದ ನೇತಾಡುತ್ತಿದ್ದ ಕೃತಿಕಾನು, ದಿನೇಶ ಸಫಲಿಗನಲ್ಲಿ, ” ಕುತ್ತಿಗೆ ಬಿಗಿಯುತ್ತಿದೆ. ಉಸಿರುಗಟ್ಟುತ್ತಿದೆ. ನನ್ನನ್ನು ಎತ್ತು. ನಂದು ಮುಗೀತು ” ಎಂದು ಅಂಗಲಾಚಿದರೂ ದಿನೇಶ ಸಫಲಿಗನು ಕೃತಿಕನು ನಿಂತಿದ್ದ ಕಾಲಿನ ಬುಡದ ಕಲ್ಲನ್ನು ಜಾರಿಸಿ, ತಪ್ಪಿಸುತ್ತಾನೆ ಕ್ರತಿಕನ ಮೊಬೈಲ್ ಪೋನನ್ನು ತೆಗೆದುಕೊಂಡು ಬಂದು ಹಿರಿಯಡ್ಕ ಬಳಿಯ ಬಜೆ ಡ್ಯಾಂ ಬಳಿ ಬಂದು ನೀರಿಗೆ ಎಸೆಯುತ್ತಾನೆ.  ದಿನೇಶ ಸಫಲಿಗನು ಮತ್ತೆ ಪುನಃ ಹಿಂತಿರುಗಿ ಕೃತಿಕನನ್ನು ಕೊಲೆ ಮಾಡಿದ ಸ್ಥಳಕ್ಕೆ ಹೋಗಿ ಕೃತಿಕನು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡು ಮನೆಗೆ ತೆರಳಿರುತ್ತಾನೆ ಎಂದು ತಾನು ಮಾಡಿದ ಕೊಲೆಯ ವಿಚಾರವನ್ನು ಪೊಲೀಸರಿಗೆ ದಿನೇಶ್ ಸಫಲಿಗನು ತಿಳಿಸಿ ತಪ್ಪೊಪ್ಪಿಕೊಂಡಿರುತ್ತಾನೆ. ದಿನೇಶ ಸಫಲಿಗನು ಕೃತಿಕನಿಂದ ಪಡೆದ ಸಾಲದ ಹಣವನ್ನು ವಾಪಾಸು ಕೊಡದೆ ವಂಚಿಸುವ ದುರದ್ದೇಶದಿಂದಲೇ ಈ ರೀತಿಯಾಗಿ ಪೂರ್ವನಿಯೋಜಿತ ಯೋಜನೆ ನಡೆಸಿ ಕ್ರತಿಕನನ್ನು ನಂಬಿಸಿ ಮೋಸದಿಂದ ಕೊಲೆ ಮಾಡಿ ಇದೀಗ ಜೈಲು ಸೇರಿದ್ದಾನೆ.
  • ಈ ಬಗ್ಗೆ ಕ್ರತಿಕನ ಸೋದರತ್ತೆ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ತನಿಖೆ ನಡೆಯುತ್ತಿದ್ದು, ಪ್ರಕರಣ ದಾಖಲಾಗಿರುತ್ತದೆ .
error: No Copying!