Spread the love
  • ಬ್ರಹ್ಮಾವರ: ಅಕ್ಟೋಬರ್ 21(ಹಾಯ್ ಉಡುಪಿ ನ್ಯೂಸ್) ಬಾರ್ಕೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳ್ಳರು ಕಳ್ಳತನಕ್ಕೆ ಯತ್ನಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
  • ಬ್ರಹ್ಮಾವರ ತಾಲೂಕು, ಹನೇಹಳ್ಳಿ ಗ್ರಾಮದ, ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶಿವಕುಮಾರ್ ಬಿಎಸ್ (33) ರವರು ದಿನಾಂಕ 20-10-2022ರಂದು ಬೆಳಿಗ್ಗೆ ಕಾಲೇಜಿಗೆ ಬಂದು ನೋಡಿದಾಗ ದಿನಾಂಕ 19/10/2022 ರಂದು ರಾತ್ರಿ ಯಾರೋ ಕಳ್ಳರು ಕಾಲೇಜಿನ ಪ್ರಾಂಶುಪಾಲರ ಕೊಠಡಿ ಹಾಗೂ ಕಛೇರಿಯ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು ಒಳಹೋಗಿ, ಕಛೇರಿಯಲ್ಲಿನ  2 ಕಪಾಟುಗಳ ಬೀಗ ಮುರಿದಿದ್ದು, 5 ಕಪಾಟುಗಳನ್ನು ಹುಡುಕಾಡಿದ್ದು, 3 ಮೇಜು ಡ್ರಾವರುಗಳ ಬೀಗಗಳನ್ನು ಮುರಿದು ಚೆಲ್ಲಾಪಿಲ್ಲಿ ಮಾಡಿರುತ್ತಾರೆ. ಪ್ರಾಂಶುಪಾಲರ ಮೇಜಿನ 2 ಡ್ರಾವರುಗಳನ್ನು ತೆರೆದು ಡ್ರಾವರನ್ನು ಹುಡುಕಾಡಿರುತ್ತಾರೆ ಅಲ್ಲದೇ ಪ್ರಾಂಶುಪಾಲರ ಕೊಠಡಿಯಲ್ಲಿನ ಸಿ.ಸಿ.ಟಿ.ವಿ.ಯ ಡಿವಿಆರ್‌ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಡಿವಿಆರ್‌ನ  ಮೌಲ್ಯ ರೂಪಾಯಿ 7000/- ಆಗಿರುತ್ತದೆ. ಎಂದು ಪ್ರಾಂಶುಪಾಲರು ನೀಡಿದ ದೂರಿನಂತೆ
  • ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .

error: No Copying!