Spread the love
  • ಉಡುಪಿ: ಅಕ್ಟೋಬರ್ 18 ( ಹಾಯ್ ಉಡುಪಿ ನ್ಯೂಸ್ )
  • ಉಡುಪಿ ನಗರದಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆಯೆಂದು ಸಾರ್ವಜನಿಕರಿಂದ ವ್ಯಾಪಕ ದೂರು ಬರುತ್ತಿದ್ದು ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
  • ಉಡುಪಿ ನಗರ ಪೊಲೀಸ್‌ ಠಾಣೆ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್.ಪಿ ರವರಿಗೆ ದಿನಾಂಕ 17-10-2022ರಂದು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸಿಟಿ ಬಸ್ ನಿಲ್ದಾಣದ ಎದುರಿನ  ಗೂಡಂಗಡಿಯ ಬಳಿಯಲ್ಲಿ ಓರ್ವ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಎಗ್ಗಿಲ್ಲದೆ ಮಟ್ಕಾ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿದ್ದಾನೆ ಎಂದು ದೊರೆತ ಖಚಿತ ಮಾಹಿತಿಯ ಮೇರೆಗೆ  ಅಲ್ಲಿಗೆ ಕೂಡಲೇ ದಾಳಿ ನಡೆಸಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಉಡುಪಿ ತಾಲೂಕು, ಪುತ್ತೂರು ಗ್ರಾಮದ ನಿಟ್ಟೂರು,ಅಡಕದ ಕಟ್ಟೆ ವಿಜಯನ್ ರ ಬಾಡಿಗೆ ಮನೆ ನಿವಾಸಿ ವಿಠಲ ಶಂಕರಪ್ಪ ಹಿರೇಕುರುಬರ್ (26) ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದು ಆತನನ್ನು ವಿಚಾರಣೆ ನಡೆಸಿದಾಗ ತಾನು ಕಮೀಷನ್‌ ಹಣಕೋಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿದ್ದು, ಸಂಗ್ರಹಿಸಿದ ಹಣವನ್ನು ರಮೇಶ್‌ ಎಂಬಾತನಿಗೆ ನೀಡುತ್ತಿದ್ದು ,ರಮೇಶನು ಶ್ರೀನಿವಾಸ ಎಂಬಾತನಿಗೆ ನೀಡುತ್ತಿದ್ದು ಶ್ರೀನಿವಾಸ ನು ಲಿಯೋ ಕರ್ನೇಲಿಯೋ ಗೆ ಕೊಡುತ್ತಿರುವುದಾಗಿ ತಿಳಿಸಿದ್ದು, ಆತನ  ವಶದಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂಪಾಯಿ 1,470/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ, ಬಾಲ್‌ಪೆನ್‌, ಒಪ್ಪೊ ಮೊಬೈಲ್‌ ಫೋನ್‌-1 ನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .
error: No Copying!