ಉಡುಪಿ: ಅಕ್ಟೋಬರ್ 2 (ಹಾಯ್ ಉಡುಪಿ ನ್ಯೂಸ್) ಪರ್ಕಳ ಈಶ್ವರ ನಗರದಲ್ಲಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಯುವಕನನ್ನು ಪೋಲಿಸರು ಬಂಧಿಸಿದ್ದಾರೆ
ಸೆನ್ ಠಾಣಾ ಸಿಬ್ಬಂದಿ ಮಾಯಪ್ಪ ಅವರು ದಿನಾಂಕ 28-09-2022, ರಂದು ಅಕ್ರಮ ಗಾಂಜಾ ಮಾರಾಟ ಮತ್ತು ಸೇವನೆ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡುವ ಬಗ್ಗೆ ಉಡುಪಿ, ಮಣಿಪಾಲ ಕಡೆಗಳಲ್ಲಿ ಸಂಚರಿಸಿಕೊಂಡಿರುವಾಗ, ಬಂದ ಖಚಿತ ಮಾಹಿತಿ ಮೇರೆಗೆ ಉಡುಪಿ ತಾಲೂಕು, ಹೆರ್ಗ ಗ್ರಾಮದ, ಈಶ್ವರ ನಗರ, ವಿಜಯದುರ್ಗ ಅಪಾರ್ಟ್‌ಮೆಂಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತು ಸೇವಿಸಿರುವಂತೆ ಕಂಡು ಬಂದ ಮೊಹಮ್ಮದ್ ಹಜೀಮ್ ಎಂ.ಪಿ ಎಂಬಾತನನ್ನು ವಶಕ್ಕೆ ಪಡೆದು, ಠಾಣೆಗೆ ಕರೆತಂದು ಠಾಣಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು, ಠಾಣಾಧಿಕಾರಿಯವರು ಆತನನ್ನು ಮೆಡಿಕಲ್ ತಪಾಸಣೆಗೊಳಪಡಿಸಿದ್ದು , ದಿನಾಂಕ 01.10.2022 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ತಜ್ಞರು ನೀಡಿದ ವರದಿಯಲ್ಲಿ ಮೊಹಮ್ಮದ್ ಹಜೀಮ್ ಈತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.