ಶಂಕರನಾರಾಯಣ: ಅಕ್ಟೋಬರ್ 1 (ಹಾಯ್ ಉಡುಪಿ ನ್ಯೂಸ್) ಹಿಲಿಯಾಣ ಗ್ರಾಮದ ವ್ಯಕ್ತಿಯೋರ್ವರಿಗೆ ತೊಂದರೆ ಕೊಡುವ ಉದ್ದೇಶದಿಂದ ವಿನಾ ಕಾರಣ ಹಲ್ಲೆ ನಡೆಸಿರುವ ಬಗ್ಗೆ ದೂರು ದಾಖಲಾಗಿದೆ.
ಉಡುಪಿ ಜಿಲ್ಲೆಯ, ಬ್ರಹ್ಮಾವರ,ಹಿಲಿಯಾಣ ಗ್ರಾಮದ ಹೈಕಾಡಿ,ಹಾಡಿಮನೆ ನಿವಾಸಿ ನೂರುಲ್ಲಾ ಎಂಬವರಿಗೆ ಹಿಲಿಯಾಣ ಗ್ರಾಮ,ಹೈಕಾಡಿ ನಿವಾಸಿ ಅಜೀಮ್ ಎಂಬಾತ ಈ ಹಿಂದೆ ಯಾವಾಗಲೂ ತೊಂದರೆ ಮಾಡುತ್ತಿದ್ದು, ದಿನಾಂಕ 30/09/2022 ರಂದು ನೂರುಲ್ಲಾರು ಶುಕ್ರವಾರದ ಪ್ರಾರ್ಥನೆಗೆ ಎಂದು ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಮಸೀದಿಗೆ ಹೋಗಿದ್ದು, ನಂತರ ಪ್ರಾರ್ಥನೆ ಮುಗಿಸಿ ಮಸೀದಿಯ ಎದುರಿನ ಅಂಗಡಿಯ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಜೀಮ್ ನು ನೂರುಲ್ಲಾ ರನ್ನು ತಡೆದು ನಿಲ್ಲಿಸಿ ಕೈಯಿಂದ ಕೆನ್ನೆಗೆ ಹೊಡೆದು ನಿನ್ನನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ನೂರುಲ್ಲಾರವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.