Spread the love

ಮಣಿಪಾಲ: ಅಕ್ಟೋಬರ್ 1(ಹಾಯ್ ಉಡುಪಿ ನ್ಯೂಸ್) ಮಣಿ ಪಾಲ ಪೋಲಿಸರು ನಿರಂತರವಾಗಿ ಗಾಂಜಾ ದಾಳಿ ನಡೆಸಿದ್ದು ಏಳು ಜನ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್‌  ಠಾಣಾ  ಪೊಲೀಸ್‌ ಉಪನಿರೀಕ್ಷಕರಾದ ರಾಜಶೇಖರ ವಂದಲಿ ಇವರಿಗೆ ದಿನಾಂಕ 28-09-2022ರಂದು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಮಾದಕ ವಸ್ತು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಆಯುಶ್‌ ಕುಮಾರ್‌ (21) ,ಹರ್ಷ ಕುಮಾರ್ (21), ಮೊಹಮ್ಮದ್ ಹಸನ್ ರಾಜಾ (21), ಯಶ್ ಚಹಲ್ (21), ಆಕಾಶ್ ಅಗರ್ವಾಲ್ (19) ,ಅರಮಾನ್ ಗಂಧರ್ವ ಕೊಟ್ಟಾಯ್ ಕುಮಾರ್ (21), ಅನನ್ಯ ಗರ್ಗ (21) ಎಂಬವರನ್ನು  ವಶಕ್ಕೆ ಪಡೆದು ಅದೇ ದಿನ ಗಾಂಜಾ  ಸೇವನೆ ಮಾಡಿದ ಕುರಿತು ವೈಧ್ಯಕೀಯ ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಇವರೆಲ್ಲರೂ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 30/09/2022 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ NDPS ರಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!