Spread the love

ಗುಜರಾತ್: ಅಕ್ಟೋಬರ್ 1 (ಹಾಯ್ ಉಡುಪಿ ನ್ಯೂಸ್) ಗುಜರಾತ್‌ನ ಮೆಹಸಾನ ಜಿಲ್ಲೆಯ ಕಸಲ್‌ಪುರ ಗ್ರಾಮದಲ್ಲಿರುವ ಒಎನ್‌ಜಿಸಿ (ತೈಲ ಮತ್ತು ನೈಸರ್ಗಿಕ ಅನಿಲ ನಿಗಮ) ಬಾವಿಯಲ್ಲಿ ಭಾರೀ ಸ್ಫೋಟವಾಗಿದೆ . ಸ್ಫೋಟದ ನಂತರ ಅನಿಲ ಸೋರಿಕೆಯಾಗಿದ್ದು. ಸುಮಾರು 2 ಕಿಲೊ ಮೀಟರ್‌ ವ್ಯಾಪ್ತಿಯಲ್ಲಿರುವ 12 ಹಳ್ಳಿಗಳ ಜನರು ಸಂಕಷ್ಟ ದಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ರಾತ್ರಿ 1 ಗಂಟೆ ಸುಮಾರಿಗೆ ಈ ಸ್ಫೋಟವಾಗಿದೆ ಎಂದು ತಡವಾಗಿ ಬೆಳಕಿಗೆ ಬಂದಿದೆ. ಸ್ಪೋಟದಿಂದ ಆಗುತ್ತಿರುವ ಅನಿಲ ಸೋರಿಕೆಯನ್ನು ತಡೆಯಲು ಒಎನ್ ಜಿಸಿ ತಂಡ ಕಾರ್ಯ ನಿರ್ವಹಿಸುತ್ತಿದೆ.

ಸ್ಫೋಟದ ಸದ್ದು ಸುಮಾರು 4 ಕಿಲೋ ಮೀಟರ್ ವ್ಯಾಪ್ತಿಯ ಹಳ್ಳಿಯ ಜನರಿಗೆ ಕೇಳಿಸಿಕೊಂಡಿದೆ ಎಂದಿದ್ದಾರೆ. ಸ್ಫೋಟದ ನಂತರ ಸೋರಿಕೆಯಾದ ಅನಿಲವು ಸುಮಾರು 2 ಕಿ.ಮೀ ಪ್ರದೇಶಕ್ಕೆ ಹರಡಿದೆ ಎಂದು ಸ್ಥಳೀಯ ಶಾಸಕ ಭಾರತ್‌ಜಿ ಠಾಕೂರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸೋರಿಕೆ ಇನ್ನೂ ನಿಂತಿಲ್ಲ, ಒಎನ್ ಜಿಸಿ ಸೋರಿಕೆ ತಡೆಯಲು ಕಾರ್ಯ ನಿರ್ವಹಿಸುತ್ತಿದೆ, ಅನಾರೋಗ್ಯ ಗೊಂಡಿರುವ ಗ್ರಾಮಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

error: No Copying!