
- ಕೋಟ: ಸೆಪ್ಟೆಂಬರ್ 18(ಹಾಯ್ ಉಡುಪಿ ನ್ಯೂಸ್) ತೆಕ್ಕಟ್ಟೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
- ಕೋಟ ಪೊಲೀಸ್ ಠಾಣೆ ಪಿಎಸ್ಐ ಮಧು ಬಿಇ ಇವರು ದಿನಾಂಕ 16-09-2022ರಂದು ಸಿಬ್ಬಂದಿಯವರೊಂದಿಗೆ ಇಲಾಖಾ ವಾಹನದಲ್ಲಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಕನ್ನುಕೆರೆ ಜಂಕ್ಷನ್ ಎಂಬಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಸಂಜೆ 4.00 ಗಂಟೆಗೆ ಇಲಿಯಾಸ್ ಎಂಬಾತ ನಿಂತುಕೊಂಡಿದ್ದು, ಆತನ ಬಾಯಿಯಿಂದ ಅಮಲು ಪದಾರ್ಥ ಸೇವನೆಯಂತಹ ವಾಸನೆ ಬರುತ್ತಿದ್ದು, ಅವನನ್ನು ಪೋಲಿಸರು ವಿಚಾರಿಸಿದಾಗ ತಾನು ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದು. ಅವನನ್ನು ವಶಕ್ಕೆ ಪಡೆದು ಕುಂದಾಪುರ ತಾಲೂಕು ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಇಲಿಯಾಸ್ ಎಂಬಾತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.