ಮಲ್ಪೆ: ಸೆಪ್ಟೆಂಬರ್ 13 (ಹಾಯ್ ಉಡುಪಿ ನ್ಯೂಸ್) ಮಲ್ಪೆ ಪೊಲೀಸ್ ಠಾಣೆ ಪೋಲಿಸ್ ಉಪನಿರೀಕ್ಷಕರಾದ ಸಕ್ತಿವೇಲು ಈ ಇವರು ದಿನಾಂಕ 09-09-2022 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕೊಡವೂರು ಗ್ರಾಮದ ತೆಂಕನಿಡಿಯೂರು ಗ್ರಾಮ ಗರಡಿಮಜಲು ನಲ್ಲಿ ಓರ್ವ ವ್ಯಕ್ತಿ ನಿಂತಿದ್ದು,ಆತನನ್ನು ವಿಚಾರಿಸಿದಾಗ ಆತ ತನ್ನ ಹೆಸರು ಎನ್ ಸ್ಟೀಫನ್(23) ಎಂದು ತಿಳಿಸಿದ್ದು ಆತನ ಬಾಯಿಯಿಂದ ಗಾಂಜಾದಂತಹ ವಾಸನೆ ಬಂದಿದ್ದು, ಅವನು ಗಾಂಜಾದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ಬಂದು ಆತನನ್ನು ವೈದ್ಯಕೀಯ ತಪಾಸಣೆ ಗಾಗಿ ಪ್ರೊಫೆಸರ್ ಅಂಡ್ ಹೆಡ್ ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು, ಪರೀಕ್ಷಿಸಿದ ವೈದ್ಯರು ಎನ್ ಸ್ಟೀಫನ್ ಗಾಂಜಾ ಸೇವಿಸಿರುವ ಬಗ್ಗೆ ದಿನಾಂಕ 12/09/2022 ರಂದು ದೃಢ ಪತ್ರ ನೀಡಿದ್ದುಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.