ಕೊಲ್ಲೂರು: ಸೆಪ್ಟೆಂಬರ್ 11 (ಹಾಯ್ ಉಡುಪಿ ನ್ಯೂಸ್) ಕೊಲ್ಲೂರು ದೇವಸ್ಥಾನಕ್ಕೆ ಯಾತ್ರಾರ್ಥಿಗಳಾಗಿ ಬಂದಿದ್ದ ಕುಟುಂಬದ ಮಹಿಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆ ಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಮುರಗನ್ (52), ತಂದೆ: ಬಾಲಕೃಷ್ಣ ಪುಳ್ಳ, ವಾಸ: ಪೋರಂ ನಿವಾಸ ಚಕ್ಕಪಾಲ್ ವಿಳಪಿಲ್ಲೆ ಅಂಚೆ ಮತ್ತು ಗ್ರಾಮ ಕಾಚಾಗಡ ತಾಲೂಕು ತಿವೇಂಡ್ರಂ ಜಿಲ್ಲೆ. ಕೇರಳ ರಾಜ್ಯ ಎಂಬವರು ಮತ್ತು ಅವರ ಹೆಂಡತಿ ಚಾಂದಿ ಶೇಖರ್ (42) ಮತ್ತು ಮಗ ಆದಿತ್ಯನ್, ಹಾಗೂ ಅವರ ರಕ್ತ ಸಂಬಂಧಿಗಳು ಇತರ ಕುಟುಂಬ ವರ್ಗದವರೂ ಒಣಂ ಹಬ್ಬದ ಪ್ರಯುಕ್ತ ಕೇರಳ ರಾಜ್ಯದಿಂದ ಹೊರಟು ದಿನಾಂಕ 10/09/2022 ರಂದು ಕೊಲ್ಲೂರು ಶ್ರೀ.ಮೂಕಾಂಬಿಕಾ ದೇವಸ್ಥಾನಕ್ಕೆ ಯಾತ್ರೆಗೆ ಬಂದು ಕೊಲ್ಲೂರು ಯಮುನಾ ವಿಹಾರ್ ವಸತಿ ಗೃಹದಲ್ಲಿ ಉಳಿದುಕೊಂಡು ಸಂಜೆ ವೇಳೆ ಕುಟುಂಬದವ ರೊಂದಿಗೆ ಕೊಲ್ಲೂರು ಗ್ರಾಮದ ಸೌಪರ್ಣಿಕ ಸ್ನಾನ ಘಟ್ಟಕ್ಕೆ ಬಂದು ಸಂಜೆ 5:15 ಗಂಟೆಗೆ ಮುರುಗನ್ ರು ಸೌಪರ್ಣಿಕ ನದಿಯ ದಡದಲ್ಲಿ ಸ್ನಾನ ಮಾಡಲು ನೀರಿಗೆ ಇಳಿದವರು ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿದ್ದು ಅವರನ್ನು ರಕ್ಷಣೆ ಮಾಡಲು ಅವರ ಮಗ ಆದಿತ್ಯನ್ ನದಿಯ ನೀರಿಗೆ ಇಳಿದಾಗ ಆತನು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದು ಆದಿತ್ಯನ್‌ನನ್ನು ರಕ್ಷಣೆ ಮಾಡಲು ಈಜು ಬಾರದ ಆತನ ತಾಯಿ ಚಾಂದಿಶೇಖರ್ ರವರು ನದಿಯ ನೀರಿಗೆ ಧುಮುಕಿ ನೀರಿನ ಸೆಳತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿರುತ್ತಾರೆ ಎಂದು ದೂರಲಾಗಿದೆ. ಮುರುಗನ್ ರನ್ನು ಮತ್ತು ಆದಿತ್ಯನ್ ರವರನ್ನು ಸ್ಥಳೀಯರು ರಕ್ಷಣೆ ಮಾಡಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.