Spread the love

ಕಾರ್ಕಳ: ಸೆಪ್ಟೆಂಬರ್ 10 (ಹಾಯ್ ಉಡುಪಿ ನ್ಯೂಸ್) ನಿಟ್ಟೆ ಗ್ರಾಮದಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದವರನ್ನು ಪೋಲಿಸರು ಬಂಧಿಸಿದ ಘಟನೆ ನಡೆದಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ತೇಜಸ್ವಿ.ಟಿ. ಇವರು ದಿನಾಂಕ 9-09-2022ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಾರ್ಕಳ ಗ್ರಾಮಾಂತರ ಠಾಣಾ ಸರಹದ್ದಿನ ನಿಟ್ಟೆ ಗ್ರಾಮದ ಕೆಮ್ಮಣ್ಣು  ಡ್ಯಾಮ್‌ನ ಬಳಿಯ ಕೆ.ಪಿ.ಟಿ.ಸಿಎಲ್‌ನ ಪಾಳು ಬಿದ್ದ ಹಳೆಯ ಕಟ್ಟಡದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು  ಇಸ್ಪೀಟು ಜುಗಾರಿ  ಆಟ ಆಡುತ್ತಿರುವುದಾಗಿ  ಸಾರ್ವಜನಿಕರಿಂದ ಇವರಿಗೆ  ದೊರೆತ ವರ್ತಮಾನದಂತೆ ಇವರು ಸಿಬ್ಬಂದಿಯವರೊಂದಿಗೆ  ದಾಳಿ ನಡೆಸಿ ಜುಗಾರಿ ನಿರತರಾಗಿದ್ದ 1.  ಪ್ರಥಮ್‌ಶೆಟ್ಟಿ (29 )ವಾಸ ಪೊಂಜೆರ ಮನೆ, ಪರಪ್ಪಾಡಿ, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಉಡುಪಿ ಜಿಲ್ಲೆ, 2. ಸಂದೀಪ (29) ಎರ್ಮುಂಜೆ   ಪಳ್ಳ ನಿಟ್ಟೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ, 3  .ಗುರು ಪ್ರಸಾದ (23) ವಾಸ: ಮದನಾಡು ದರ್ಖಾಸ್‌‌ಮನೆ, ನಿಟ್ಟೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ, 4.  ರಾಜೇಶ್ ಪೂಜಾರಿ ವಾಸ: ಸೂರಂಟೆ ನಿಟ್ಟೆ ಕೆಮ್ಮಣ್ಣು ನಿಟ್ಟೆ ಗ್ರಾಮ ಇವರನ್ನು  ವಶಕ್ಕೆ ಪಡೆದು ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ  ನಗದು ರೂಪಾಯಿ 1360/- , ಇಸ್ಪೀಟ್ ಎಲೆಗಳು -52, ನೆಲಕ್ಕೆ ಹಾಸಿದ ಬ್ಯಾನರ್-1, ಮತ್ತು ಇಸ್ಪೀಟ್ ಕಾರ್ಡ್ ನ ಪ್ಯಾಕೇಟ್-1 ನ್ನು  ವಶಕ್ಕೆ  ಪಡೆದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  

error: No Copying!