Spread the love

ಬೈಂದೂರು: ಸೆಪ್ಟೆಂಬರ್ 10 (ಹಾಯ್ ಉಡುಪಿ ನ್ಯೂಸ್) ಶಿರೂರು ಪರಿಸರದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿದ್ದ ಯುವಕನನ್ನು ಬಂಧಿಸಿದ ಘಟನೆ ನಡೆದಿದೆ.

ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ ಎ ಕಾಯ್ಕಿಣಿ ರವರು ದಿನಾಂಕ 8-09-2022 ರಂದು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಶಿರೂರು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ  ಸಿಗರೇಟು ಸೇವನೆ ಮಾಡಿಕೊಂಡು ಅಮಲಿನಲ್ಲಿರುವ ಮಹಮ್ಮದ್ ಶರೀಫ್ (25) ವಾಸ: 8-5 ಮೊಮಿನ್ ಮೊಹಲ್ಲಾ , ಶಿರೂರು ಗ್ರಾಮ ಬೈಂದೂರು ತಾಲೂಕು ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನು ನಿಷೇದಿತ ಮಾಧಕ ವಸ್ತುಗಳನ್ನು ಸೇವಿಸಿರುವ ಸಂಶಯದಿಂದ ಅವನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಯ ಬಗ್ಗೆ ವೈದ್ಯಾಧಿಕಾರಿಯವರು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು ಈತನನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಮಹಮ್ಮದ್ ಶರೀಫ್ ರವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿಯನ್ನು ನೀಡಿದ ಮೇರೆಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ NDPS ACT-1985 ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!