ಲಂಡನ್: ಸೆಪ್ಟೆಂಬರ್ 9 (ಹಾಯ್ ಉಡುಪಿ ನ್ಯೂಸ್) ಬ್ರಿಟನ್ ರಾಣಿ ಎಲಿಜಬೆತ್ ನಿನ್ನೆ ರಾತ್ರಿ ಸೆಪ್ಟೆಂಬರ್ 8 ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ .
ಎಲಿಜಬೆತ್ ಎಲೆಕ್ಸಾಂಡ್ರಾ ಮೇರಿ ಏಪ್ರಿಲ್ 21-1926 ರಲ್ಲಿ ಜನಿಸಿದ್ದು ತನ್ನ 25 ನೇ ವಯಸ್ಸಿನಲ್ಲಿ ತನ್ನ ತಂದೆಯ ಅಕಾಲ ಮರಣಾ ನಂತರ ಫೆಬ್ರವರಿ 6 -1952 ರಲ್ಲಿ ಬ್ರಿಟನ್ ರಾಣಿ ಯಾಗಿ ಪಟ್ಟಕ್ಕೇರಿದರು.
ಸುದೀರ್ಘ 70 ವರ್ಷಗಳ ಕಾಲ ಅವರು ಬ್ರಿಟನ್ ರಾಣಿಯಾಗಿ ಬ್ರಿಟನ್ನಿನಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣೀಕರ್ತರಾಗಿದ್ದರು.