Spread the love

ಬೆಳಗಾವಿ: ಸೆಪ್ಟೆಂಬರ್ 7 (ಹಾಯ್ ಉಡುಪಿ ನ್ಯೂಸ್)

ರಾಜ್ಯದ ಹಿರಿಯ ರಾಜಕಾರಣಿ, ಉತ್ತರ ಕರ್ನಾಟಕದ ಪ್ರಭಾವಿ ರಾಜಕೀಯ ನಾಯಕ , ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ರಚನೆಗೆ ಪಟ್ಟು ಹಿಡಿದಿದ್ದ ಸಚಿವ ಉಮೇಶ್ ಕತ್ತಿ ರಾತ್ರಿ ಹ್ರದಯಾಘಾತದಿಂದ ನಿಧನರಾಗಿದ್ದಾರೆ.

ತಾನು ಸ್ಪರ್ಧಿಸಿದ್ದ 9 ಚುನಾವಣೆಗಳಲ್ಲಿ ಎಂಟರಲ್ಲಿ ಗೆದ್ದು ರಾಜ್ಯ ರಾಜಕಾರಣದಲ್ಲಿ ದಾಖಲೆ ನಿರ್ಮಿಸಿದ್ದರು. ನಾಲ್ಕು ದಶಕಗಳ ಕಾಲದ ತಮ್ಮ ರಾಜಕೀಯ ಜೀವನದಲ್ಲಿ ಉಮೇಶ್ ಕತ್ತಿ ಯವರು ಜೆಡಿಯು, ಜೆಡಿಎಸ್ ಮತ್ತು ಬಿಜೆಪಿ ಯನ್ನು ಪ್ರತಿನಿಧಿಸಿದ್ದರು.

ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದಿಂದ ಭಾರೀ ಬೆಂಬಲವನ್ನು ಪಡೆದಿದ್ದ ಅವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಇಟ್ಟಿದ್ದರು.ತನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿಯೂ ಬಿಂಬಿಸಿ ಕೊಂಡಿದ್ದರು.

ರಾಜ್ಯ ಆಹಾರ, ನಾಗರಿಕ ಪೂರೈಕೆ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಯವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕಂಬನಿ ಮಿಡಿದಿದ್ದಾರೆ.

error: No Copying!