ಶಿರ್ವಾ: ಆಗಸ್ಟ್ 17(ಹಾಯ್ ಉಡುಪಿ ನ್ಯೂಸ್) ವ್ಯಕ್ತಿಯೋರ್ವರಿಗೆ ಮೂವರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಘಟನೆ ನಡೆದಿದೆ.
ದಿನಾಂಕ 16/08/2022 ರಂದು ಮಧ್ಯಾಹ್ನ 02:30 ಗಂಟೆಗೆ ಐವನ್ ಪಿಂಟೋ, ರೊನಾಲ್ಡ್ ಪಿಂಟೋ, ಅನಿಲ್ ನಜರತ್ ಎಂಬವರು ಕಾಪು ತಾಲೂಕು , ಪಾದೂರು ಗ್ರಾಮದ ಕೊಲ್ಲಬೆಟ್ಠು ನಿವಾಸಿ ವಿನೋದ್ ಕುಮಾರ್ (36) ಇವರ ಬಾಡಿಗೆ ಮನೆಗೆ ಏಕಾಏಕಿ ಬಂದು ಮನೆಯೊಳಗೆ ನುಗ್ಗಿ ಐವನ್ ಪಿಂಟೋ ಎಂಬಾತ ಹೆಲ್ಮಟ್ ನಿಂದ ವಿನೋದ್ ಕುಮಾರ್ ರ ಕೆನ್ನೆಗೆ ಹೊಡೆದು ಹಲ್ಲೆ ಮಾಡಿ, ನಂತರ ಮೂವರೂ ಸೇರಿ ಮನೆಯ ಕಿಟಕಿ ಗಾಜುಗಳನ್ನು,ಮನೆ ಬಾಗಿಲನ್ನು ಕಲ್ಲಿನಿಂದ ಹೊಡೆದು ಒಡೆದು ಹಾಕಿ 15,000/- ರೂಪಾಯಿ ನಷ್ಟವನ್ನು ಉಂಟುಮಾಡಿರುತ್ತಾರೆ. ಅಲ್ಲದೇ ವಿನೋದ್ ಕುಮಾರ್ ರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.