ಕೋಟ: ಆಗಸ್ಟ್ 16(ಹಾಯ್ ಉಡುಪಿ ನ್ಯೂಸ್) ಗಂಡನೇ ಹೆಂಡತಿಯ ದ್ವಿಚಕ್ರ ವಾಹನ ಕಳ್ಳತನ ನಡೆಸಿದ ಘಟನೆ ಸಾಲಿಗ್ರಾಮದಲ್ಲಿ ನಡೆದಿದೆ.
ಶ್ರೀಮತಿ ಕೋಮಲ ಇವರು ಮೂಡಬಿದ್ರೆಯ ನಿವಾಸಿ ಸುಶಾಂತ ಜಿ ಕರ್ಕೇರ ಎಂಬವರನ್ನು ದಿನಾಂಖ 16/09/2021ರಂದು ಮದುವೆಯಾಗಿದ್ದು, ಮದುವೆಯ ನಂತರ ಉಡುಪಿಯ ಸಂತೆಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದು , ನಂತರ ಬಾಡಿಗೆ ಮನೆ ಖಾಲಿ ಮಾಡಿ ಮುಂಬೈಗೆ ಹೋಗಿರುತ್ತಾರೆ ಎನ್ನಲಾಗಿದೆ.
ಶ್ರೀಮತಿ ಕೋಮಲಾರವರು ವಾಪಾಸ್ಸು ಸಾಲಿಗ್ರಾಮದ ಮನೆಗೆ ಬಂದಿದ್ದು ದಿನಾಂಕ 9/12/2021 ರಂದು ಸುಶಾಂತ್, ಕೋಮಲಾರ ಮನೆಗೆ ಬಂದಿರುತ್ತಾರೆ ಎನ್ನಲಾಗಿದೆ. ಆದರೆ ಮನೆಯಿಂದ ಹೇಳದೇ ಕೇಳದೇ ಶ್ರೀ ಮತಿ ಕೋಮಲಾರವರ KA20EX2000 ರೋಯಲ್ ಎನ್ ಪೀಲ್ಡ್ ಮೋಟಾರ್ ಸೈಕಲನ್ನು ತೆಗೆದುಕೊಂಡು ಹೋಗಿರುತ್ತಾರೆ ಎಂದು, ನಂತರ ವಿಚಾರಿಸಿದಾಗ ಸುಶಾಂತ್ ಹಲವಾರು ಕಡೆಗಳಲ್ಲಿ ಇದೇ ರೀತಿ ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಯಿತು ಎಂದಿದ್ದಾರೆ. ಹಾಗೆಯೇ ಕೋಮಲಾರವರ ಬೈಕನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಿದ್ದು ,ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.