ಉಡುಪಿ: ಆಗಸ್ಟ್ ೧೪ (ಹಾಯ್ ಉಡುಪಿ ನ್ಯೂಸ್) ಮದುವೆ ಯಾಗಿ ಹಣಕ್ಕಾಗಿ ಹೆಂಡತಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.
ತಬಸ್ಸುಮ್ ಎಂಬವರು ಜಿ. ರಾಜ ಹುಸೇನ್ ಎಂಬವರೊಂದಿಗೆ ದಿನಾಂಕ: 13/01/2022 ರಂದು ಉಡುಪಿ ಸಬ್ ರಿಜಿಸ್ಟರ್ ಆಫೀಸ್‌ನಲ್ಲಿ ರಿಜಿಸ್ಟರ್ ಮದುವೆಯಾಗಿದ್ದು, ಮದುವೆಯಾದ ನಂತರ ಉಡುಪಿ ಅಂಬಾಗಿಲು ಪ್ರಿನ್ಸ್ ಪ್ಯಾಲೇಸ್‌ನಲ್ಲಿ ದಾಂಪತ್ಯ ಜೀವನ ಮಾಡಿಕೊಂಡಿದ್ದು, ಮದುವೆಯಾದ ನಂತರ ಒಂದು ವಾರ ಮಾತ್ರ ಜಿ.ರಾಜ ಹುಸೇನ್ ನು ತಬಸ್ಸುಮ್ ರವರೊಂದಿಗೆ ಒಳ್ಳೆಯ ರೀತಿಯಲ್ಲಿ ಜೀವನ ಮಾಡಿದ್ದು, ನಂತರ ಹಣಕ್ಕಾಗಿ ಜಿ. ರಾಜ ಹುಸೇನ್ ನು ತಬಸ್ಸುಮ್ ರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದನು ಎನ್ನಲಾಗಿದೆ.
ಶೆಹನಾಜ್ ಬೇಗಂ ,.ಶಬ್ಬೀರ್ ,.ಶಮ ಪರ್ವಿನ್ ,ಅಜರುದ್ದೀನ್ ,.ಇರ್ಫಾನ್ ಇವರುಗಳು ತಬಸ್ಸುಮ್ ರ ಮನೆಗೆ ಬಂದು ತಬಸ್ಸುಮ್ ಳು ಜಿ. ರಾಜ ಹುಸೇನ್ ನೊಂದಿಗೆ ಜೀವನ ಮಾಡಬೇಕಾದರೆ ಚಿನ್ನ ಹಾಗೂ ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದು, ತಬಸ್ಸುಮ್ ಳು ಜಿ.ರಾಜ ಹುಸೇನ್ ನಿಗೆ ಹೊಸಪೇಟೆಯಲ್ಲಿ 3,60,000/- ರೂಪಾಯಿ ಬಟ್ಟೆ ಅಂಗಡಿ ಹಾಕಲು ಹಣ ನೀಡಿರುತ್ತಾರೆ. ಹಾಗೂ 2 ಬೈಕ್‌ಗಳನ್ನು ತೆಗೆಸಿಕೊಟ್ಟಿರುತ್ತಾರೆ. ದಿನಾಂಕ: 07/07/2022 ರಂದು ಜಿ.ರಾಜ ಹುಸೇನ್ ನು ತಬಸ್ಸುಮ್ ರನ್ನು ಹೊಸಪೇಟೆಗೆ ಕರೆದುಕೊಂಡು ಹೋಗಿದ್ದು, ವಾಪಾಸು ಮನೆಗೆ ಬಂದಾಗ ಜಿ.ರಾಜಾ ಹುಸೇನ್ ನು ನನ್ನ ಹೆಂಡತಿಯ ಮುಂದೆ ಯಾಕೆ ಗಲಾಟೆ ಮಾಡಿದೆ ಎಂದು ತಬಸ್ಸುಮ್ ರ ಮುಖಕ್ಕೆ, ಹೊಟ್ಟೆಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿರುತ್ತಾನೆ ಎನ್ನಲಾಗಿದೆ. ಅಲ್ಲದೇ ತಬಸ್ಸುಮ್ ರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನೀನು ನನ್ನ ಮನೆಯವರ ವಿಷಯದಲ್ಲಿ ಸುಮ್ಮನೇ ಇರಬೇಕು. ಅವರು ಕೇಳಿದಷ್ಟು ಹಣ ಕೊಡಬೇಕು ಇಲ್ಲದಿದ್ದರೆ ನನ್ನ ಮಕ್ಕಳನ್ನು ಕರೆಯಿಸಿ ನಿನ್ನನ್ನು ಕೊಂದು ಬಿಸಾಡುವುದಾಗಿ ಜೀವ ಬೆದರಿಕೆ ಹಾಕಿ ಮನೆ ಬಿಟ್ಟು ಹೋಗಿರುತ್ತಾನೆ ಎಂದು ದೂರು ನೀಡಿದ್ದು ,ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.