ಬ್ರಹ್ಮಾವರ: ಆಗಸ್ಟ್ ೧೪(ಹಾಯ್ ಉಡುಪಿ ನ್ಯೂಸ್) ಬ್ರಹ್ಮಾವರ ಕಾಲೇಜಿನ ಪ್ರಾಧ್ಯಾಪಕ ರೀರ್ವರು ಯಾವುದೋ ಕಾರಣಕ್ಕೆ ಕಾಲೇಜು ಆವರಣದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ.
ಬ್ರಹ್ಮಾವರ ತಾಲೂಕು ಹನೇಹಳ್ಳಿ ಗ್ರಾಮದ, ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೊರಿಯಲ್ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಅರುಣ್ ಕುಮಾರ್ ಹೆಚ್.ಆರ್ ಅವರು ದಿನಾಂಕ 12.08.2022 ರ ಮಧ್ಯಾಹ್ನ ಕಾಲೇಜು ಕ್ಯಾಂಟೀನ್‌ಗೆ ತೆರಳಿದಾಗ ಅಲ್ಲಿದ್ದ ಅವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಅನ್ನಪೂರ್ಣೇಶ್ವರಿ ಎಂಬವರು ಅರುಣ್ ಕುಮಾರ್ ರವರನ್ನು ಏಕವಚನದಿಂದ ಕೂಗಿ ಕರೆದಿದ್ದಾರೆ . ಇದಕ್ಕೆ ಅರುಣ್ ಕುಮಾರ್ ರವರು ಪ್ರತಿಕ್ರಿಯಿಸದೇ ಇದ್ದಾಗ, ಅನ್ನಪೂರ್ಣೇಶ್ವರಿ ಯವರು ಪ್ರಾಂಶುಪಾಲರ ಕೊಠಡಿಯವರೆಗೆ ಅರುಣ್ ಕುಮಾರ್ ರವರನ್ನು ಹಿಂಬಾಲಿಸಿಕೊಂಡು ಬಂದು ಅರುಣ್ ಕುಮಾರ್ ರಿಗೆ ಮತ್ತು ಅವರ ತಂದೆ-ತಾಯಿಯನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಸಾರ್ವಜನಿಕವಾಗಿ ಮುಜುಗರವುಂಟು ಮಾಡಿರುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಅರುಣ್ ಕುಮಾರ್ ರವರು ಪ್ರಾಂಶುಪಾಲರಲ್ಲಿ ದೂರು ನೀಡಿದಾಗ ಪ್ರಾಂಶುಪಾಲರ ಎದುರೆ ಅನ್ನಪೂರ್ಣೇಶ್ವರಿಯು ನಿನ್ನ ತೇಜೋವಧೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು ಅರುಣ್ ಕುಮಾರ್ ರವರು ದೂರು ನೀಡಿದ್ದು ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ರಹ್ಮಾವರ : ಬ್ರಹ್ಮಾವರ ತಾಲೂಕು ಹನೇಹಳ್ಳಿ ಗ್ರಾಮದ, ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೊರಿಯಲ್ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಆಗಿರುವ ಅನ್ನಪೂರ್ಣ ಇವರು ದಿನಾಂಕ 12.08.2022 ರಂದು ಮಧ್ಯಾಹ್ನ ಕಾಲೇಜಿನಲ್ಲಿ ಅರುಣ್ ಕುಮಾರ್ ಹೆಚ್.ಆರ್ ಎಂಬವರನ್ನು ಭೇಟಿಯಾಗಿ ಅವರಲ್ಲಿ ನನ್ನ ಬಗ್ಗೆ ಯಾಕೆ ಈ ರೀತಿ ಮಾತನಾಡುತ್ತೀರಿ ಎಂದು ಕೇಳಿದ್ದಕ್ಕೆ ಅರುಣ್ ಕುಮಾರ್ ಅವಾಚ್ಯ ಶಬ್ದದಿಂದ ಬೈದಿರುತ್ತಾರೆ ಎಂದು ಅನ್ನಪೂರ್ಣ ರವರು ದೂರು ನೀಡಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.