ಉಡುಪಿ: ಆಗಸ್ಟ್ 10 (ಹಾಯ್ ಉಡುಪಿ ನ್ಯೂಸ್) ಬಾರ್ ಒಂದರಲ್ಲಿ ಯುವಕರ ಗುಂಪೊಂದು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು ತಾಲೂಕು, ಉದ್ಯಾವರ ನಾರಾಯಣ ಗುರು ಸಂಘದ ಬಳಿ ನಿವಾಸಿ ಯೋಗೀಶ್ ಪೂಜಾರಿ ( 28 ) ಇವರು ದಿನಾಂಕ 09/08/2022 ರಂದು ರಾತ್ರಿ ಊಟಕ್ಕೆಂದು ತನ್ನ ಅಣ್ಣ ಮನೋಹರ್ ಪೂಜಾರಿ ಎಂಬವರೊಂದಿಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಶಿರಿಬೀಡು ಪಿಂಗಾರ ಹೋಟೇಲ್‌ಗೆ ಹೋಗಿದ್ದು 9 :00 ಗಂಟೆಗೆ ಹೋಟೇಲ್‌ನಲ್ಲಿ ಸೂರಜ್, ಅನಿಲ್ ಎಂಬವರು ಹಾಗೂ ಇತರ ಇಬ್ಬರು ಒಟ್ಟು ಸೇರಿ ಅವಾಚ್ಯ ಶಬ್ದಗಳಿಂದ ಬೈದು, ಟೇಬಲ್ ಮೇಲಿದ್ದ ಬೀಯರ್‌ಗ್ಲಾಸ್‌ನಿಂದ ಸೂರಜ್ ಮತ್ತು ಅನಿಲ್‌ರವರು ಯೋಗೀಶ್ ಪೂಜಾರಿ ಮತ್ತು ಅವರ ಅಣ್ಣನಿಗೆ ತಲೆ, ಎದೆ ಹಾಗೂ ಕೈಗಳಿಗೆ ಹಲ್ಲೆ ಮಾಡಿದ್ದು, ಇನ್ನಿಬ್ಬರು ಕೈಯಿಂದ ಹೊಡೆದು, ಕಾಲಿನಿಂದ ತುಳಿದಿದ್ದಲ್ಲದೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ (27) ಎಂಬವರು ತನಗೆ ಹಲ್ಲೆ ಯಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ಸಲ್ಲಿಸಿದ್ದಾರೆ.