ಹೆ ಮoಗ್ಯ ಒಮ್ಮೆ ಓದ್ಲೇ.!
ಯೋಚ್ನೆ ಮಾಡ್ಬೇಕಾ , ಮಾಡಬಾರದ .?
ತುಂಬಾ ನೊಂದು ಬೇಜಾರ್ ನಲ್ಲಿ ಇದೀನಿ , ಜೊತೆ ಇದ್ದ ಜೀವಾ ಸರಿಯಾಗಿ ಮಾತಾಡ್ತಾ ಇಲ್ಲ, ನಾನು ಯಾರಿಗೂ ಬೇಡವಾಗಿದ್ದೀನಿ, ಹಾಗೆ ಹಿಂಗೆ ಅಂತ ಜೊತೆ ನಾನು ಸಾಲ ಮಾಡಿನಿ, ಮನೆ ಕಡೆ ತುಂಬಾ ಕಷ್ಟ . ಮಕ್ಕಳು , ಸಂಸಾರ ಒಂದ್ ಹೊತ್ತಿನ ಊಟಕ್ಕೂ ಗತಿ ಇಲ್ಲ . ನಾನು ತುಂಬಾ ಯೋಚ್ನೆಯಲ್ಲಿ ಕೊರಗುತ್ತಾ ಇದೀನಿ , ಅಂದ್ರೆ ನಾನು ಅಲ್ಲ ನೀವು. ಇವತ್ತು ನಿಮ್ಮ __# ಮೇಲೆ ಆಣೆ ಮಾಡಿ ಒಪ್ಪಿಕೊಳ್ಳಿ ಯೋಚ್ನೆ ಮಾಡದೆ ನಾನು ಇದೀನಿ ಅಂತ. ನೋಡಿ ಇಲ್ಲಿ ಯಾರುನು ಸಹ ಯೋಚ್ನೆ ಇಲ್ಲದೆ ಇಲ್ಲ , ಎಲ್ಲರಿಗೂ ಒಂದ್ ಒಂದ್ ಸಮಸ್ಯೆ ಇದ್ದೇ ಇದೆ. ಈಗ ಸಾಲ ಮಾಡಿದೆ ಅಂತ ಸಾಯೋಕ್ ಆಗುತ್ತ , ಯಾವಳೊ ಬಿಟ್ಟ್ ಹೋದ್ಲು ಅಂತ ಸಾಯೊಕ್ ಆಗುತ್ತ.? ಆಯೋ ನನ್ ಬಾಳು ಈ ತರ ಆಯ್ತು ಅಂದ್ರೆ ಅದು ಮತ್ತೆ ಸರಿ ಹೋಗಲ್ಲ ! ನಾವೇ ಮೊದಲು ಸರಿ ಹೋಗ್ಬೇಕು. ಜೀವನದಲ್ಲಿ ಸದಾ ಕಷ್ಟಗಳು ರಾತ್ರಿ ತರ ಬಂದು ಬಂದು ಹೋಗುತ್ತವೆ. ಆ ಕಷ್ಟಕ್ಕೆ ನಾವೇ ಒಂದ್ ಲೈಟ್ ಹಾಕಿ ಬೆಳಕು ಮಾಡ್ಕೋ ಬೇಕು ಅದು ಬಿಟ್ಟು ನನ್ನ ಹಣೆ ಬರಹಕ್ಕೆ ಹೊಣೆ ಯಾರು ಅಂದ್ರೆ ಆಗುತ್ತಾ.? ಕಷ್ಟ ಮನುಷ್ಯನಿಗೆ ಬರ್ದೇ ಮರಕ್ಕ ಬರುತ್ತೆ . ( ಮರಕ್ಕೂ ಬರುತ್ತೆ ಅದು ಅದಕ್ಕೆ ಮಾತ್ರ ಗೊತ್ತು , ನಿನ್ ಕಷ್ಟ ಏನು ಅಂತ ಇಲ್ಲಿ ಯಾರುನು ಸಹ ಬಂದು ಕೇಳೋದಿಲ್ಲ , ಕೇಳುದ್ರು ಯಾರು ಸಹಾಯ ಮಾಡಲ್ಲ , ಸಹಾಯ ಮಾಡೋ ಮನಸು ಇದ್ರು ಅವರ ಅತ್ರ ಏನು ಗತಿ ಇರೋಲ್ಲ ಇದು ವಾಸ್ತವ )
ಎಲ್ಲಿದೆ ಹಣೆ ಬರಹ.!? ಹೆಂಗ್ ಇದೆ ಹಣೆ ಬರಹ ! ಇದು ನಿಜ ನಾ ? ಮತ್ತೆ ಕಾಣೋದೇ ಇಲ್ಲ. ಅಲ್ಲ ರಿ ಅಂಗೈ ಅಗಲದ ಹಣೆ ಮೇಲೆ ಜೀವ ನ ಬರಿಯೋಕೆ ಸಾಧ್ಯನ.? ಅದು ಎಲ್ಲ ನಾವು ಮಾಡಿಕೊಂಡದ್ದು ಅಷ್ಟೆ. ಹಣೆ ಬರಹ ಅದು ಇದು ಎಂತದ್ದು ಇಲ್ಲ ಗುರು. ನಿನ್ ನಾನ್ ಇದುನ್ನ ಮಾಡಲೇ ಬೇಕು ಅಂತ ಮಾಡು ಯಾಕ್ ಆಗಲ್ಲ ನೋಡೋಣ . ನೂರಕ್ಕೆ ೨ ರಷ್ಟು ಅಷ್ಟೆ ಆಗದೆ ಇರೋದು. ಎಲ್ಲದಕ್ಕೂ ಹಣೆ ಬರಹ ಅಂತ ಅಡ್ಡ ತರುವ ನಿಮ್ಮ ಜನ್ಮಕ್ಕೆ. ಥೂ.!
ಮೊದಲು ಬದಲಾಗಿ ಹಣೆ ಬರಹದ ಹೆಸರಲ್ಲಿ ತಲೆ ಮೇಲೆ ಕೈಯಿಟ್ಟು ಕುಳಿತರೆ ಏನೂ ಆಗದು , ಇದ್ದಂಗೆ ಇರ್ತಿರಾ .
ಅಂಗೈ ಅಗಲದ ಹಣೆ ಯಲ್ಲಿ
ಎಲ್ಲಿದೆ ಹಣೆ ಬರಹ
ಯಾರು ಬರೆದರು ಆ ಬರಹ
ಹೇಗೆ ಇದೆ ಹಣೆ ಬರಹ
ಕೂರ ಬೇಡ ಯೋಚ್ನೆ ಯಲ್ಲಿ
ನಿನ್ನ ಜೀವನ ನಿನ್ನ ಕೈಯಲ್ಲಿ
ಸಾಧಿಸು ಏನನ್ನಾದರೂ ಸಾಯಿವುದರಲ್ಲಿ.
ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ.!
ನೋಡ.. ಮೋಡ ಕವಿದ ಬಿತ್ತನೆ ಆಗಬೇಡ.
ಯೋಚ್ನೆ.! ಯೋಚ್ನೆ.! ಯೋಚ್ನೆ.! ಮೊದ್ಲು ಈ ಯೋಚ್ನೆ ನ ಮೆಟ್ಟ್ ಮೆಟ್ಟಲ್ಲಿ ಹಾಕಬೇಕಾ ಅಥವಾ ಯೋಚ್ನೆ ಮಾಡೋ ನಮ್ಮನ್ನೇ ನಾವೇ ಒಡೆದು ಕೊಳ್ಳಬೇಕಾ ನೀವೆ ಹೇಳಿ. ಇವತ್ತು ಬೆಳಿಗ್ಗೆ ಎದ್ದಾಗ್ ನಿ0ದ ಸಂಜೆ ಮಲಗಿದರು ಕನಸಲ್ಲಿನು ಯೋಚ್ನೆ ಮಾಡ್ತೀರಾ . ನಿದ್ದೆ ಬರಬೇಕು ಅಂದ್ರು ಯೋಚ್ನೆ ಕಾರಣ , ನಿದ್ದೆ ಬರಲಿಲ್ಲ ಅಂದ್ರು ಯೋಚ್ನೆ ಕಾರಣ . ಒಟ್ಟಿನಲ್ಲಿ ನರರ ಮನಸಿನ ನರಗಳ ರಕ್ತ ಕುಡಿದು ಅವನ ನೆಮ್ಮದಿ ಕಿತ್ತು ಕೊಂಡು ಅವನ ಬಲಹೀನ ಮಾಡಿ ಅವನನ್ನು ಕೊಲೆ ಮಾಡುವ ವಿಷ ಅಂದ್ರೆ ಅದು ಯೋಚ್ನೆ .
ಇನ್ನ ಒಂದ್ ಎನ್ ಅಂದ್ರೆ ಒಂದು ಯೋಚ್ನೆ ನಿನ್ನನ್ನ ಯಾವ ಮಟ್ಟಕ್ಕೆ ಬೇಕಾದ್ರೂ ತೆಗೆದುಕೊಂಡು ಹೋಗಿ ಗೆಲ್ಲಿಸಬಹುದು ಇಲ್ಲ ಸಾಯಿಸಬಹುದು, ನೋಡಿ ಅತಿ ಯೋಚ್ನೆ ಮಾಡ್ತಾ ಇದ್ರೆ ಮೆಟಲ್ ಆಗ್ತೀರಾ! ಯಾಕೆ ? ಯಾಕೆ ಅಂದ್ರೆ ಯೋಚ್ನೆ ಮಾಡ್ತಾ ಇರೋದು ನೀನು ನಾನ್ ಅಲ್ಲ. ಅಂಗರ ನೀನು ಯೋಚ್ನೆನೆನೆ ಮಾಡಲ್ಲ ಅಂತ ನಾ ? ಅಲ್ಲ ಗುರು ಯೋಚ್ನೆ ಮಾಡ್ತಾ ಇದ್ರೆ ಮಾಡ್ತಾನೆ ಇರ್ತೀವಿ , ನಾವು ಯೋಚ್ನೆ ಬಿಟ್ರು ನಮ್ಮುನ ಯೋಚ್ನೆ ಬಿಡಲ್ಲ. ಯಾಕೆ ಅಂದ್ರೆ ಅದು ಒಂದು ಕೆಟ್ಟ ಅಭ್ಯಾಸ. ನೋಡಿ ಯಾರ್ಗೆ ಕೆಲ್ಸ ಇರಲ್ವೋ ಅವರಿಗೆ ಯೋಚ್ನೆ ಅನ್ನೋದು ಜಾಸ್ತಿ ಇರುತ್ತೆ . ಯಾಕ್ ಅಂದ್ರೆ ಮಿದ್ಲುನ ಫ್ರೀ ಬಿಡಬಾರದು ಫ್ರೀ ಬಿಟ್ರೆ ಅದು ಎಲ್ಲೆಲ್ಲೋ ಹೋಗುತ್ತೆ . ನೋಡಿ ನೀವು ಯೋಚ್ನೆ ಮಾಡೋದ್ರಿಂದ ನಿಮ್ಮ ಮನಸಿನ ಸ್ಥಿತಿ , ದೇಹದ ಗತಿ ಹಾಗೆ ಆಗಿನ ಪರಿಸ್ಥಿತಿ ಅಸ್ಥ ವೆಸ್ತವಾಗಿ ಒಂದ್ ದಿನ ನೀವು ಹಸ್ತಿಯಾಗಿ ಹೋಗ್ತೀರಾ .
ಆಯೋ ಹಾಳಗ್ ಹೋಗ್ಲಿ ಈಗ ಯೋಚ್ನೆ ಮಾಡದೆ ಇರೋಕ್ ಎನ್ ಮಾಡ್ಬೇಕು ಅದುನ್ನ ಬೋಗ್ಲು ” ಕುಯ್ದಿದ್ದೆ ಕುಯ್ದ ಗೊಳಗೆ ಸಿದ್ದ ” ಅಂತ ಕುಯ್ಯಾಬೇಡ.
ಮೊದಲು ನಿನ್ನನ್ನ ನೀನು ಮರಿ . ಅಂದ್ರೆ ಸತ್ತೋಗ್ ಬೇಡ ಆಗ ನಿನ್ನ ನೀನು ಮರಿಯಲ್ಲ , ನಿನ್ನವರೆ ನಿನ್ನ ಮರೆತು ಬಿಡ್ತಾರೆ . ಅದ್ಕೆ ನಿನಗೆ ಇಂಟ್ರೆಸ್ಟ್ ಇರುವ ಕೆಲಸದ ಮೇಲೆ ಗಮನ ಹರಿಸಿ ಪ್ರೀತಿ ತೋರ್ಸಿ , ಮೈ ಬಗ್ಗಿಸಿ ಕೆಲ್ಸ ಮಾಡು ನಿನ್ನನ್ನ ನೀನೇ ಗುರುತಿಸಿಕೋ ಇಲ್ಲಿ ಯಾರೂ ನಿನ್ನ ಗುರುತಿಸಲ್ಲ , ಯಾಕ್ ಅಂದ್ರೆ ಇಲ್ಲಿ ಇರುವವರು ಕಾಲು ಎಳೆಯುವವರೊ ಹೊರತು ಕೈ ಕೊಟ್ಟು ಮುಂದೆ ತಳ್ಳುವವರು ಅಲ್ಲ ” ಇನ್ನ ಹಳ್ಳಕ್ಕೆ ತಳ್ಳುತ್ತಾರೆ “.
ಈಗ ಯೋಚ್ನೆ ನ ಮಾಡದೆ ಇರಾಕ್ ಸಾಧ್ಯ ನಾ ? ಇಲ್ಲ ಯಾವುದೇ ಕಾರಣಕ್ಕೂ ಸಾಧ್ಯ ಇಲ್ಲ ಆದ್ರೆ ಅದರಿಂದ ಆಚೆ ಬರೋಕೆ , ನಾವು ನೆಮ್ಮದಿ ಇಂದ ಇರಲು ಪ್ರಯತ್ನ ಮಾಡಬಹುದಲ್ವ ಇರಬಹುದು. ಹೇಗೆ
ಯೋಚನೆ ಯನ್ನು ತೋರಿ
ನಿನ್ನ ಕಾರ್ಯದಲ್ಲಿ ನಿನ್ನನ್ನ ನೀನೆ ಮರಿ
ಸ್ನೇಹಿತರ ಜೊತೆ ಸೇರಿ
ನಗು ನಗುತಾ ನೋವು ಮರಿ
ಸಂಗೀತದಲ್ಲಿ ಮುಳುಗಿ
ಮಾತಿನಲ್ಲಿ ಪಳಗಿ
ಯೋಚ್ನೆ ಯ ಕ್ಷಣದಲ್ಲಿ ತೂಗಿ
ನಿನ್ನ ಯೋಚನೆ ಮುಂದಿನ ಯೋಜನೆಯಾಗಿ
ಹೊರ ಬಾ ಈ ನಾಡಿಗೆ
ಒಂದ್ ಒಳ್ಳೆ ಮನಸಾಗಿ
ಇಲ್ಲ ಯೋಚ್ನೆ ಮಾಡಿ
ಮನದಲ್ಲಿ ರೋಗ ಮನೆ ಮಾಡಿ
ನಿನ್ನನ್ನು ಸಣ್ಣ ಮಾಡಿ
ವಿಷದಂತೆ ಕೊಲೆ ಮಾಡಿ
ನೆಮ್ಮದಿಯನ್ನು ಭಸ್ಮ ಮಾಡಿ
ಮಸಣ ದಲ್ಲಿ ಮಣ್ಣು ಮಾಡಿ ಬಿಡುತ್ತದೆ
ನಿನ್ನಲ್ಲಿ ಇದ್ದ ನಿನ್ನದೇ ಒಂದು ಸಣ್ಣ ಯೋಚನೆ.
ಇನ್ನ ಇದೆ ಈ ಯೋಚ್ನೆ ಬಗ್ಗೆ ಮಾತನಾಡುವುದು,ಅದು ಹೇಳಿರೆ ನಿಮಗೆ ಓದುವ ಆಸಕ್ತಿ ಬರಲ್ಲ ನಿದ್ದೆ ಬರುತ್ತೆ. ಆ ನಿದ್ದೆ ಮಾಡಬೇಕು ಅಂದ್ರು ನು ಒಂದ್ ಸಾರಿ ಯೋಚ್ನೆ ಮಾಡ್ತೀರಾ ಅಲ್ವಾ.? ಯೋಚ್ನೆ ಮಾಡದೆ ಇರೋಕೆ ಆಗುತ್ತ ? ನೋಡಿ ಆಗುತ್ತ ಅಂತ ಆದ್ರೂ ಯೋಚ್ನೆ ಮಾಡ್ಬೇಕು ಅಲ್ವಾ .? ಹ ಹ ಹಾಹ ! ಆದ್ರೆ ತುಂಬಾ ಮಾಡ್ಬೇಡಿ ನಾನು ತುಂಬಾ… ಹೇಳೋಲ್ಲ. ಸಧ್ಯಾಕ್ಕೆ ನಾನು ಯೋಚ್ನೆ ಮಾಡ್ತಾ ಇಲ್ಲ ನೀವು ಯೋಚ್ನೆ ಮಾಡದೆ ನಿಮಗೆ ನಿಮಗೆ ಎನ್ ಆದ್ರೂ ಹೇಳಬೇಕು ಅಂದ್ರೆ ಯೋಚ್ನೆ ಮಾಡದೆ ಈ ದೂರವಾಣಿ ಗೆ ಒಂದ್ ಮೆಸೇಜ್ ಮಾಡಿ.೭೪೮೩೧೪೬೬೯೭ .
ಯಾರೋ ಹೇಳ್ತಾ ಇದ್ದ , ಎನ್ ಗೊತ್ತಾ.? ಏನು…? ನಿಂಗ್ ಯಾಕ್ ಬೇಕ್ ಅದು ಕೆಲ್ಸ ನೋಡ್ಕೋ ಹೋಗಲೇ ಯಾವುದೋ ಒಂದ್ ಮ್ಯಾಟರ್ ಅಂದ್ರೆ ಮೂಗು ಬಾಯಿ ಬಿಟ್ಕೊಂಡು ಬಂದ್ ಬಿಡ್ತೀರಾ ಅಲ್ವಾ. ಏ ಮೊದಲು ಬದಲಾಗಿ , ಹಣೆ ಬರಹಕ್ಕೆ ಹೊಣೆ ಯಾರು ಅನ್ನಬೇಡಿ . ನಿಮ್ಮದು ನೀವು ನೋಡಿ ಇನ್ನೋಬ್ಬರಿಗೆ ನೋವು ಮಾಡಬೇಡಿ . ಆ ಸಮಯದಲ್ಲಿ ಏನ್ ಆದ್ರೂ ಒಂದ್ ಸಬಾಕಿ ಅಲ್ಲ ಧಬಾಕಿ ನಿಮ್ಮ ಮನಸಲ್ಲಿ ಇರುವ ಯೋಚ್ನೆ ಸುಟ್ಟಾಕಿ ಏನ್ ಆದ್ರೂ ಈ ಕವಿ ಹನಿ ನ ಬೈಯ್ಬೇಕ ಅಂತ ಇದ್ರೆ ಒಂದ್ ಮೆಸೇಜ್ ಹಾಕಿ ನಿಮ್ಮ ಜೊತೆ ಸದಾ ಇರುವ ಈ ಹನಿ ಗುಬ್ಬಿ .
ಹನಿ . ಗುಬ್ಬಿ ಕವಿರತ್ನ .
7483146697