Spread the love

ಕಾಪು: ಆಗಸ್ಟ್ 1(ಹಾಯ್ ಉಡುಪಿ ನ್ಯೂಸ್) ದೆಂದೂರುಕಟ್ಟೆಯಲ್ಲಿ ಕೋಳಿ ಅಂಕಕ್ಕೆ ದಾಳಿ ನಡೆಸಿ ಕಾಪು ಠಾಣಾ ಪೊಲೀಸರು 8 ಜನರನ್ನು ಬಂಧಿಸಿದ ಘಟನೆ ನಡೆದಿದೆ.

ದಿನಾಂಕ 31/07/2022 ರಂದು   ಕಾಪು ಪೊಲೀಸ್ ಠಾಣೆ ಪೋಲಿಸ್ ಉಪನಿರೀಕ್ಷಕರಾದ (ತನಿಖೆ) ಭರತೇಶ ಕಂಕಣವಾಡಿ ಇವರಿಗೆ  ದೆಂದೂರುಕಟ್ಟೆಯ, ಇಂದ್ರಾಳಿ ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲುಗಳಿಗೆ ಹಿಂಸಾತ್ಮಕ ರೀತಿಯಲ್ಲಿ ಬಾಳುಗಳನ್ನು ಕಟ್ಟಿ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಯುತ್ತಿರುವುದಾಗಿ  ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಸುತ್ತಲೂ ನಿಂತಿದ್ದ ಜನರು ಓಡಿ ಹೋಗುತ್ತಿದ್ದು, ಅವರುಗಳನ್ನು ಪೋಲಿಸರು ಬೆನ್ನಟ್ಟಿ ಹಿಡಿದುಕೊಂಡು ಬಂಧಿಸಿ ಅವರುಗಳ ಹೆಸರನ್ನು ವಿಚಾರಿಸಿದಾಗ 1) ಸದಾನಂದ ಪೂಜಾರಿ, 2) ತೇಜಸ್, 3) ಸುರೇಶ್, 4) ನಿತೇಶ್, 5) ಸಂತೋಷ್, 6) ಸ್ವಾಮಿನಾಥ್, 7) ಅಣ್ಣಪ್ಪ ಪೂಜಾರಿ, 8) ಸಂದೀಪ್ ಶೆಟ್ಟಿ ಎಂಬುದಾಗಿ ತಿಳಿಸಿದ್ದು, ಕೋಳಿಗಳ ಕಾಲುಗಳಿಗೆ ಬಾಳುಗಳನ್ನು (ಕತ್ತಿ) ಕಟ್ಟಿ ಹಣವನ್ನು ಪಣವಾಗಿರಿಸಿಕೊಂಡು ಕೋಳಿ ಅಂಕ ಆಡುತ್ತಿದ್ದುದಾಗಿ ಇವರೆಲ್ಲರೂ ತಿಳಿಸಿದ್ದು ಅವರುಗಳು ಜೂಜಾಟ ಮಾಡಲು ಉಪಯೋಗಿಸಿದ ನಗದು 450/- ರೂಪಾಯಿ, 10 ಕೋಳಿಗಳು ಹಾಗೂ ಬಾಳು (ಸಣ್ಣ ಕತ್ತಿ) ಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!