Spread the love

ಬೈಂದೂರು: ಆಗಸ್ಟ್ ೧(ಹಾಯ್ ಉಡುಪಿ ನ್ಯೂಸ್) ಅಪರಿಚಿತ ಮಹಿಳೆಯ ಶವ ರೈಲ್ವೇ ಹಳಿಯ ಬಳಿ ಪತ್ತೆಯಾಗಿದ್ದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿಜೂರು ರೈಲ್ವೆ ಸ್ಟೇಷನ್ನ ಸ್ಟೇಷನ್ ಮಾಸ್ಟರ್ ಸಂದೀಪ ಕುಮಾರ (೪೫) ಬಿಜೂರು ಇವರು  ದಿನಾಂಕ 31/07/2022 ರಂದು ಬಿಜೂರು ರೈಲ್ವೆ ಸ್ಟೇಷನ್ ನಲ್ಲಿ  ಕರ್ತವ್ಯ ದಲ್ಲಿರುವ ಸಮಯ ಬೆಳಗ್ಗೆ 08:50 ಗಂಟೆಗೆ ಟ್ರ್ಯಾಕ್ ಸೇಪ್ಟಿಮಾನ್ (ಟಿಎಸ್ಎಮ್) ಆದ ಗಣಪತಿ ಮುಕ್ರೀಯವರು ಸೇನಾಪುರ ಸ್ಟೇಷನ್ ಮಾಸ್ಟರಗೆ ಕರೆಮಾಡಿ ತಾನು ಸೇನಾಪುರದಿಂದ ರೈಲ್ವೆ ಹಳಿಯನ್ನು ಚೆಕ್ ಮಾಡಿಕೊಂಡು ಅರೆಹೊಳೆ ಕಡೆಗೆ ಬರುತ್ತಿರುವಾಗ ಕಿರಿಮಂಜೇಶ್ವರದ  ರೈಲ್ವೆ ಟ್ರ್ಯಾಕ್ ಕೀ ಮೀ ಸಂಖ್ಯೆ 639/7 ರಿಂದ 639/8 ಮಧ್ಯದ ರೈಲ್ವೆ ಹಳಿಯ ಪಕ್ಕದಲ್ಲಿರುವ ಡ್ರೈನೇಜ್ (ಚರಂಡಿ)ನಲ್ಲಿ ಸುಮಾರು 45 ರಿಂದ 50 ವರ್ಷದ ವಯಸ್ಸಿನ ಒಂದು ಹೆಂಗಸಿನ ಮೃತದೇಹ ಬಿದ್ದ ಸ್ಥಿತಿಯಲ್ಲಿ ಇರುತ್ತದೆ ಎಂಬುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!