ಉಡುಪಿ: ಜುಲೈ 29 (ಹಾಯ್ ಉಡುಪಿ ನ್ಯೂಸ್) ಉಡುಪಿಯ ಪುತ್ತಿಗೆ ಮಠದಲ್ಲಿ ಚಿನ್ನ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿದೆ
ಉಡುಪಿ ಶಿವಳ್ಳಿ ಗ್ರಾಮದ ಶ್ರೀ ಪುತ್ತಿಗೆ ಮಠದಲ್ಲಿ ವ್ಯವಸ್ಥಾಪಕರಾಗಿ ವಿಷ್ಣುಮೂರ್ತಿ ಎಂಬವರು ಕೆಲಸ ಮಾಡಿಕೊಂಡಿದ್ದು, ದಿನಾಂಕ 26/07/2022 ರಂದು ಬೆಳಿಗ್ಗೆ 09:30 ಗಂಟೆಯಿಂದ ಬೆಳಿಗ್ಗೆ 11:00 ಗಂಟೆ ನಡುವಿನ ಸಮಯದಲ್ಲಿ ಮಠದಲ್ಲಿ ಪೂಜೆಯ ಸಂದರ್ಭದಲ್ಲಿ 6 ಜನ ಮಠದ ವಿದ್ಯಾರ್ಥಿಗಳು ಮತ್ತು ಪುರೋಹಿತ ಲಕ್ಷ್ಮಿ ಪ್ರಸಾದ್ ರವರು ಬಂದು ಹೋಗಿದ್ದು, ಪೂಜೆಯ ನಂತರ ಪೂಜಾ ಸಾಮಾಗ್ರಿಗಳನ್ನು ತೆಗೆದು ಇಡುವಾಗ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿದ್ದು, ಚಿನ್ನದ ಗಿಂಡಿಯನ್ನು ಪುರೋಹಿತ ಲಕ್ಷ್ಮಿ ಪ್ರಸಾದ್ ರವರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಅನುಮಾನ ಇದೆಯೆಂದು ಶಂಕೆ ವ್ಯಕ್ತಪಡಿಸಿದ್ದಾರೆ. ಕಳವಾದ ಚಿನ್ನದ ಗಿಂಡಿಯ ಅಂದಾಜು ಮೌಲ್ಯ ರೂ. 7,00,000/- ಆಗಬಹುದು ಎಂದು ಹೇಳಲಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ