Spread the love

ಬೈಂದೂರು: ಜುಲೈ 27(ಹಾಯ್ ಉಡುಪಿ ನ್ಯೂಸ್) ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ವ್ಯಕ್ತಿ ಯನ್ನು ಶಿರೂರಿನಲ್ಲಿ ಬಂಧಿಸಲಾಗಿದೆ.

ವಿನಯ ಕುಮಾರ್ (46)   ಆಹಾರ ನಿರೀಕ್ಷಕರು, ಬೈಂದೂರು ತಾಲೂಕು ಇವರು ದಿನಾಂಕ 26/07/2022 ರಂದು ಕರ್ತವ್ಯದಲ್ಲಿರುವಾಗ ಬೈಂದೂರು ತಾಲೂಕು ಶಿರೂರು ಗ್ರಾಮದ ಹಡವಿನಕೋಣೆ ಎಂಬಲ್ಲಿ ಖಾಜಿ ಹಸನ್ ಎಂಬವರಿಗೆ ಸಂಬಂಧಿಸಿದ ಗೋದಾಮಿನಲ್ಲಿ ಮೊಹಿದ್ದೀನ್ ಎಂಬಾತ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ ಅಕ್ರಮವಾಗಿ ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ  ದೊರೆತ ಮೇರೆಗೆ ವಿನಯ್ ಕುಮಾರ್ ರವರು  ಶಿರೂರು ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಿಗ ಪ್ರಕಾಶ್ ರಾಠೊಡ್ ರವರೊಂದಿಗೆ ಶಿರೂರು ಹಡವಿನಕೋಣೆಗೆ ಹೋಗಿ, ಈ ಮಾಹಿತಿಯನ್ನು  ಬೈಂದೂರು ಪೊಲೀಸ್ ಠಾಣೆಯ ಪಿಎಸ್ಐ ರವರಿಗೆ ತಿಳಿಸಿದ್ದು ಅವರೂ ಕೂಡಾ ಸಿಬ್ಬಂದಿಗಳೊಂದಿಗೆ ಅಲ್ಲಿಗೆ ಬಂದಿದ್ದು, ವಿನಯ್ ಕುಮಾರ್ ಹಾಗೂ ಪೊಲೀಸರು  ಸೇರಿಕೊಂಡು ಶಿರೂರು ಹಡವಿನಕೋಣೆ ಎಂಬಲ್ಲಿರುವ ಖಾಜಿ ಹಸನ್ ರವರಿಗೆ ಸಂಬಂಧಿಸಿದ ಗ್ರೀನ್ ವಿವ್ ಕಂಪೌಂಡ್ ನಲ್ಲಿರುವ ಗೋದಾಮಿಗೆ ಹೋಗಿ ಪರಿಶೀಲಿಸಿದಾಗ  ಗೋದಾಮಿನಲ್ಲಿ ಅಕ್ಕಿ ತುಂಬಿದ ಬಿಳಿ ಬಣ್ಣದ ಪಾಲಿಥೀನ್ ಚೀಲಗಳನ್ನು ದಾಸ್ತಾನು ಇರಿಸಿದ್ದು ಕಂಡು ಬಂದಿದ್ದು, ಈ ಬಗ್ಗೆ ಗೋದಾಮಿನ ಮಾಲೀಕರಾದ ಖಾಜಿ ಹಸನ್ ರವರಲ್ಲಿ ವಿಚಾರಿಸಿದಾಗ ಕುಂದಾಪುರ ತಾಲೂಕು, ಕೋಟೇಶ್ವರ ಬೀಚ್ ರೋಡ್ ನಿವಾಸಿ ಮೊಹಿದ್ದೀನ್ ಎಂಬಾತನಿಗೆ ದಾನ್ಯ ವ್ಯಾಪಾರದ ಸಲುವಾಗಿ 11 ತಿಂಗಳ ಅವಧಿಗೆ ಬಾಡಿಗೆಗೆ ನೀಡಿರುವುದಾಗಿಯೂ, ಅದರಲ್ಲಿ ಅಕ್ಕಿ ದಾಸ್ತಾನು ಇರಿಸಿದ ಬಗ್ಗೆ ತನಗೆ ತಿಳಿದಿಲ್ಲವಾಗಿ ಹೇಳಿದ್ದು ,  ಅಕ್ಕಿ ತುಂಬಿದ ಚೀಲಗಳನ್ನು ಅಧಿಕಾರಿಗಳು ಪರಿಶೀಲಿಸಿದಾಗ ತಲಾ 50 ಕೆಜಿಯಷ್ಟು ಬೆಳ್ತಿಗೆ ಅಕ್ಕಿ ಇರುವ  ಒಟ್ಟು 160 ಚೀಲಗಳು ಇದ್ದು, ಒಟ್ಟು 80 ಕ್ವಿಂಟಾಲ್ (8000 ಕೆಜಿ) ಅಕ್ಕಿ ಇರುವುದು ಕಂಡು ಬಂದಿರುತ್ತದೆ. ಈ ಅಕ್ಕಿಯ ಮೌಲ್ಯ  ರೂಪಾಯಿ 1,92,000/- ಆಗಿರುತ್ತದೆ. ಗೋದಾಮಿನಲ್ಲಿದ್ದ ಅಕ್ಕಿ ತುಂಬಿದ 160 ಚೀಲಗಳು ಹಾಗೂ 10 ಖಾಲಿ ಗೋಣಿ ಚೀಲಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದು, ಮೊಹಿದ್ದೀನ್ ನು ಸರಕಾರದ ವತಿಯಿಂದ ಫಲಾನುಭವಿಗಳಿಗೆ ವಿತರಿಸಲಾದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ 80 ಕ್ವಿಂಟಾಲ್ ಅಕ್ಕಿಯನ್ನು ಕಾನೂನು ಬಾಹಿರವಾಗಿ ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಯಾವುದೇ ದಾಖಲೆಗಳಿಲ್ಲದೇ ಸಂಗ್ರಹಿಸಿ ಗೋದಾಮಿನಲ್ಲಿ ದಾಸ್ತಾನು ಇರಿಸಿದ್ದು ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   

error: No Copying!