ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆ
ದಿನಾಂಕ 24.07.2022 ರ ಬಾನುವಾರ ಬೆಳಿಗ್ಗೆ 12 ಘಂಟೆಗೆ ಸರಿಯಾಗಿ, ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಕಛೇರಿಯ ವಾರ್ಷಿಕೋತ್ಸವವನ್ನು ಜಿಲ್ಲಾದ್ಯಕ್ಷರಾದ ಸುಜಯ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಸಾಂಘವಾಗಿ ನಡೆಯಿತು. ಜಿಲ್ಲಾ ಗೌರವಾಧ್ಯಕ್ಷರಾದ ಡಾll ನೇರೀ ಕರ್ನೆಲಿಯೋ ಕಾರ್ಯಕ್ರಮ ಉದ್ಘಾಟಿಸಿ, ಸಂಘಟನಾತ್ಮಕ ಹಿತನುಡಿಗಳನ್ನು ನುಡಿದರು. ಜಿಲ್ಲಾ ಉಪಾಧ್ಯಕ್ಷರಾದ ಉಮೇಶ್ ಶೆಟ್ಟಿ, ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಫ್ರ್ಯಾಂಕಿ ಡಿ’ಸೋಜ ಕೊಳಲಗಿರಿ, ಬ್ರಹ್ಮಾವರ ತಾಲೂಕು ಮಹಿಳಾ ಅಧ್ಯಕ್ಷೇ ದೇವಕೀ ಬಾರ್ಕೂರು, ಜಿಲ್ಲಾ ಮಹಿಳಾ ಘಟಕದ ಸಲಹೆಗಾರ್ತಿ ಸುನಂದ ಕೋಟ್ಯಾನ್, ಉಡುಪಿ ತಾಲೂಕು ಅಧ್ಯಕ್ಷರಾದ ಅ. ರಾ. ಪ್ರಭಾಕರ ಪೂಜಾರಿ, ಉಡುಪಿ ಸಂಗೊಳ್ಳಿ ರಾಯಣ್ಣ ಬಳಗದ ಅಧ್ಯಕ್ಷರಾದ ಸಿದ್ದಬಸಯ್ಯ ಹಿರೇಮಠ್, ಉಡುಪಿ ಸಂಗೊಳ್ಳಿ ರಾಯಣ್ಣ ಬಳಗದ ಗೌರವ ಸಲಹೆಗಾರರಾದ ಮಾಜಿ ಸೈನಿಕ ಕೃಷ್ಣಪ್ಪ, ಇವರುಗಳೆಲ್ಲರೂ ಸಂಘಟನಾತ್ಮಕ ಭಾಷಣ ಮಾಡಿದರು. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ ನಾಯಕ್ ರವರು ಕಾರ್ಯಕ್ರಮವನ್ನು ನಿರೂಪಿಸಿ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಯಾದ ಮುಕ್ತಪ್ರಿಯಾರವರು ಧನ್ಯವಾದ ಸಮರ್ಪಿಸಿ, ಜಿಲ್ಲಾ ಮಹಿಳಾ ಘಟಕದ ಸಾಂಸ್ಕ್ರುತಿಕ ಕಾರ್ಯದರ್ಶಿ ಮಮತಾರವರು ಸಾಂಸ್ಕ್ರುತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂಧರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಪೂಜಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೋಹನ್ ಕಲ್ಮಾಡಿ, ಜಿಲ್ಲಾ ಕಾರ್ಮಿಕ ಘಟಕದ ಪ್ರದಾನ ಕಾರ್ಯದರ್ಶಿ ಸಿದ್ದಣ್ಣ ಪುಜಾರಿ, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ಗೋಪಾಲ್ ದೊರೆ. ಜಿಲ್ಲಾ ಸದಸ್ಯರಾದ ಪ್ರೀತಮ್ ಡಿಕೋಷ್ಟ, ಪ್ರೇಮ ಶೆಟ್ಟಿ, ಲಕ್ಷ್ಮೀ, ಸುಲತಾ, ವನಜಾ, ಜಿಲ್ಲಾ ಕಾರ್ಮಿಕ ಘಟಕದ ಸದಸ್ಯರುಗಳು, ಜಿಲ್ಲಾ ಹಾಗೂ ತಾಲೂಕು ಘಟಕದ ಸದಸ್ಯರುಗಳು ಸಕ್ರೀಯವಾಗಿ ಪಾಲ್ಗೊಳ್ಳುವ ಮುಖೇನ ಕಛೇರಿಯ ವಾರ್ಷಿಕ ದಿನದ ಆಚರಣೆಯು ಭೋಜನ ಕೂಟದೊಂದಿಗೆ ವಿಜ್ರಂಭಣಿಯಿಂದ ನಡೆಯಿತು… ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.