ಜುಲೈ 24(ಹಾಯ್ ಉಡುಪಿ ನ್ಯೂಸ್) ಪರ್ಕಳ-ಮಣಿಪಾಲ ರಸ್ತೆ ದುರವಸ್ಥೆ ಬಗ್ಗೆ ಇಂದು ಪರ್ಕಳದಲ್ಲಿ ಸಾರ್ವಜನಿಕರಿಂದ ಪ್ರತಿಭಟನೆ ನಡೆಯಿತು.
ಪರ್ಕಳ-ಮಣಿಪಾಲ ಸಂಪರ್ಕ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಈಗಾಗಲೇ ಹಲವಾರು ವಾಹನಗಳು ಉರುಳಿ ಬಿದ್ದಿದ್ದು,ಹಲವರು ಗಾಯಗೊಂಡಿರುತ್ತಾರೆ. ರಸ್ತೆಯು ಕಳಪೆ ಕಾಮಗಾರಿಯಿಂದಾಗಿ ಕೆಸರುಗದ್ದೆಯಾಗಿದ್ದು, ಜನಪ್ರತಿನಿಧಿಗಳು ಇವೆಲ್ಲವನ್ನೂ ಕಂಡೂ ಕಾಣದಂತೆ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದ್ದಾರೆ. ಉಡುಪಿ ನಗರಸಭೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ರಾಜ್ಯದಲ್ಲೇ ನಂಬರ್ 1 ಸ್ಥಾನಕ್ಕೇರಲು ಪೈ ಪೋಟಿ ನಡೆಸುತ್ತಿದ್ದಾರೆ.
ಇವೆಲ್ಲವನ್ನೂ ತಿಳಿದಿರುವ ಜನಪ್ರತಿನಿಧಿಗಳು ಅವರೊಂದಿಗೆ ಕೈ ಜೋಡಿಸಿ ತೆಪ್ಪಗಿದ್ದಾರೆ.
ಇವೆಲ್ಲವನ್ನೂ ಸಹಿಸಿಕೊಂಡಿರುವ ಉಡುಪಿ ನಗರದ ಮಹಾಜನತೆ ಇದಕ್ಕೆ ಉತ್ತರ ಕೊಡಲು ಚುನಾವಣೆಯವರೆಗೆ ಕಾಯುತ್ತಿದ್ದಾರೆ.
ಇದೀಗ ಮೊದಲ ಹಂತದಲ್ಲಿ ಅವ್ಯವಸ್ಥೆಯಿಂದ ಬೇಸತ್ತ ಜನರು ಪರ್ಕಳದಲ್ಲಿ ಡಾಕ್ಟರ್ ಪಿ.ವಿ.ಭಂಡಾರಿ ನೇತೃತ್ವದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇನ್ನು ಭ್ರಷ್ಟಾಚಾರ, ಲಂಚಾವತಾರದ ಬಗ್ಗೆಯೂ ಜನರು ಬೀದಿಗಿಳಿದು ಪ್ರತಿಭಟನೆ ನಡೆಸದಿದ್ದಲ್ಲಿ ಜನಪ್ರತಿನಿಧಿಗಳು ಎಚ್ಚೆತ್ತು ಕೊಳ್ಳುವುದಿಲ್ಲ.
ಇಂದು ನಡೆದ ಪ್ರತಿಭಟನೆಯ ಫಲವಾಗಿ ಯಾದರೂ ಪರ್ಕಳ-ಮಣಿಪಾಲ ರಸ್ತೆ ದುರಸ್ತಿ ಯಾಗುವುದೋ ಕಾದು ನೋಡಬೇಕಿದೆ.