ಉಡುಪಿ – ಕಾರ್ಕಳ ಹೆದ್ದಾರಿಯ ಪರ್ಕಳದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ವಾಹನ – ಜನ ಸಂಚಾರ ದುಸ್ತರವಾಗಿದೆ. ಇದನ್ನು ನೋಡಿ ನೊಂದಿರುವ ನಮ್ಮ ನಡುವಿನ ಸಾಕ್ಷಿ ಪ್ರಜ್ಞೆ, ಡಾ. ಎ. ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆಯ ಆಡಳಿತ ನಿರ್ದೇಶಕರೂ, ಖ್ಯಾತ ಮನೋವೈದ್ಯರೂ ಆದ ಡಾ. ಪಿ. ವಿ. ಭಂಡಾರಿಯವರು ನಾಡಿದ್ದು (24/07/2022) ಆದಿತ್ಯವಾರ 9 AM ಗೆ ಪರ್ಕಳದ ಗೋಪಾಲಕೃಷ್ಣ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ನಾವು ,ನೀವೆಲ್ಲರೂ ಡಾ. ಭಂಡಾರಿಯವರ ಜೊತೆಗೆ ಸೇರಿಕೊಳ್ಳೋಣ.
~ ಶ್ರೀರಾಮ ದಿವಾಣ