Spread the love

ಉಡುಪಿ: ಜುಲೈ ೨೨ (ಹಾಯ್ ಉಡುಪಿ ನ್ಯೂಸ್) ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದ ಘಟನೆ ಉಡುಪಿಯಲ್ಲಿ ನಡೆದಿದೆ.

ವಾಣಿ ವಿ ರಾವ್ (೫೮) ಇವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕೋರ್ಟ್ ಹಿಂಬದಿ ರಸ್ತೆಯ ರುಕ್ಮಿಣಿ ಕೃಷ್ಣ ಎಂಬ ಹೆಸರಿನ ಮನೆಯಲ್ಲಿ ವಾಸವಿದ್ದು, ದಿನಾಂಕ 19/07/2022 ರಂದು ಬೆಳಿಗ್ಗೆ 10:45 ಗಂಟೆಯಿಂದ 2:10 ಗಂಟೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮನೆಯ ಒಳಪ್ರವೇಶಿಸಿ, ಬೆಡ್‌ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್‌ನಲ್ಲಿ ಇರಿಸಿದ್ದ ಬೂದು ಬಣ್ಣದ ಪರ್ಸ್ ನಲ್ಲಿದ್ದ  ರೂಪಾಯಿ 45,000/-  ನಗದು ಮತ್ತು ಕಪ್ಪು ಬಣ್ಣದ ವ್ಯಾನಿಟಿ ಬ್ಯಾಗ್‌ನಲ್ಲಿರಿಸಿದ್ದ 1) 5 ಪವನ್ ತೂಕದ ಪಚ್ಚೆಕಲ್ಲು ಇರುವ ಚಿನ್ನದ ಬ್ರೇಸ್‌ಲೇಟ್‌, 2) 6 ಪವನ್‌ ತೂಕದ ಮುತ್ತಿನ ಬಳೆ-2, 3) 5½ ಪವನ್‌ ತೂಕದ ಚಿನ್ನದ ಖಡಗ ಬಳೆಗಳು-2, 4) 6 ಪವನ್‌ ತೂಕದ ಚಿನ್ನದ ಸರ ಮತ್ತು 1 ಪವನ್‌ ತೂಕದ ಪೆಂಡೆಂಟ್‌, 5) 6 ಪವನ್‌ ತೂಕದ ಮಲ್ಲಿಗೆ ಮೊಗ್ಗು ಚಿನ್ನದ ಸರ, 6) 1½ ಪವನ್‌ ತೂಕದ ಚಿನ್ನದ ಸರ ಮತ್ತು ನೀಲಿ ಹರಳಿನ ಪೆಂಡೆಂಟ್‌, 7) ನೀಲಿ ಕಲ್ಲಿನ ಬೆಂಡೋಲೆ ಮತ್ತು ಕರಮಣಿ ಹರಳಿನ ಬೆಂಡೋಲೆ – 2 ಜೊತೆ, 8) ಜುಮ್ಕಿ ಮತ್ತು ಮಾಟಿ- 2 ಜೊತೆ, 9) 1 ಪವನ್‌ ತೂಕದ ಚಿನ್ನದ ತುಂಡುಗಳು ಮತ್ತು ಕೊಕ್ಕೆ, 10) 3 ಪವನ್‌ ತೂಕದ ಚಿನ್ನದ ನೆಕ್ಲೇಸ್‌, 11) 2½ ಪವನ್‌ ತೂಕದ ಗ್ರೇನೆಟ್‌ ಹರಳಿನ ನೆಕ್ಲೇಸ್‌ ಮತ್ತು 3 ಪವನ್‌ನ ಗ್ರೇನೆಟ್‌ ಹರಳಿನ ಬಳೆ, 12) 4 ಗ್ರಾಮ್‌ ನ ಚಿನ್ನದ ನಾಣ್ಯ-6 , 13) 4 ರೇಷ್ಮೆ ಸೀರೆಗಳು ಮತ್ತು 1 ಸಾಧಾರಣ ಸೀರೆಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 25,00,000/- ಆಗಿರುವುದಾಗಿದೆ ಎಂದು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!