Spread the love

ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಬದ್ಧವಾದ ಪ್ರಜಾಪ್ರಭುತ್ವ ಸರಕಾರ ಇದೆ.
ಜನರಿಂದಲೇ ರಚಿಸಲ್ಪಟ್ಟಿರುವ ಶಾಸನ ಸಭೆ ಇದೆ.
ಆಯಾಯ ಜನರಿಗೆ ಮೀಸಲಾದ ಜನಪ್ರತಿನಿಧಿಗಳು ಇದ್ದಾರೆ. ಇಷ್ಟಾದರೂ ಸಹ ಜನಸಾಮಾನ್ಯರು ಊಟ, ವಸತಿ, ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ವಿಷಯದಲ್ಲಿ ಅಭದ್ರತೆಯಿಂದ ಸರ್ಕಾರೇತರ ವ್ಯಕ್ತಿಗಳ ಮುಂದೆ ಸಹಾಯ ಕೇಳುತ್ತಾರೆ ಎಂದರೆ
ಇದರ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆ ಮೂಡುತ್ತದೆ.

ಜನರಿಂದಲೇ ಆಯ್ಕೆ ಆಗಿರುವ ಜನಪ್ರತಿನಿಧಿಗಳಿಗೆ
ತಮ್ಮ ಜನರಿಗೆ ನ್ಯಾಯ ಒದಗಿಸುವಲ್ಲಿ ಸದನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲು ಆಗಿಲ್ಲವೇ….
ಯಾರು ಈ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದಾರೆ….
3% ಜನರು 97% ಜನರನ್ನು ಅಂಕಿತದಲ್ಲಿ ಇರಿಸಿದ್ದಾರೆಯೇ…
ಹೇಗೆ ಸಾಧ್ಯ….
ಯಾವ ಆಧಾರದ ಮೂಲಕ….
ಯೋಚಿಸಬೇಕಾಗಿದೆ.

ವಿಧ್ಯಾವಂತರು ಮತ್ತು ಸಾಮಾಜಿಕ ಚಿಂತಕರಿಂದ ಶೋಷಿತರಿಗೆ ರಾಜಕೀಯ ಪ್ರಜ್ಞೆಯನ್ನು ಮೂಡಿಸುವ ಕೆಲಸ ಆಗಬೇಕಾಗಿದೆ.
ನಮ್ಮಲ್ಲಿ ರಾಜಕೀಯ ಪ್ರಜ್ಞೆ ಮೂಡುವಂತಾದರೆ ಅಸಹಾಯಕತೆಯಿಂದ,… ವಿವಿಧ
ಹಕ್ಕುಗಳಿಗಾಗಿ ಕಾಯುವ ಸರದಿ, ನಮ್ಮ ಮುಂದಿನ ಪೀಳಿಗೆಗೆ ಬರಲಾರದು ಎಂದು ಅನಿಸುತ್ತದೆ,.

  • ವಿ. ಎಸ್.
error: No Copying!