Spread the love

ಉಡುಪಿ: ಜುಲೈ ೭(ಹಾಯ್ ಉಡುಪಿ ನ್ಯೂಸ್) ಕಾರ್ಮಿಕ ಮಹಿಳೆಯೊಬ್ಬರ ಕರಿಮಣಿ ಸರವನ್ನು ಯಾರೋ ಕಳ್ಳರು ಕದ್ದ ಘಟನೆ ಉಡುಪಿಯಲ್ಲಿ ನಡೆದಿದೆ.

ಕಾರ್ಕಳ ತಾಲೂಕು ,ನಕ್ರೆ ಪದವು, ನಿವಾಸಿ ಶ್ರೀಮತಿ ಸುಮಲತಾ (45), ಎಂಬುವವರು 6 ತಿಂಗಳಿನಿಂದ ಉಡುಪಿಯ ಸಂದೀಪ ರೈ ಎಂಬವರ ಕೆಮಿಕಲ್ ತಯಾರಿಸುವ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 15/06/2022 ರಂದು ಸಂಜೆ 4:30 ಗಂಟೆಗೆ ಸುಮಲತಾರವರೊಂದಿಗೆ ಕೆಲಸ ಮಾಡುತ್ತಿರುವ ಪೂರ್ಣಿಮಾರವರು ಕೆಮಿಕಲ್ ತಯಾರಿಸಲು ಹೇಳಿದ್ದು, ಕೆಮಿಕಲ್ ತಯಾರಿಸುವ ಸಮಯದಲ್ಲಿ ಕರಿಮಣಿ ಸರವನ್ನು ತೆಗೆದಿರಿಸಲು ನೆನಪಿಸಿದಂತೆ ಸುಮಲತಾರವರು ಕರಿಮಣಿ ಸರವನ್ನು ಕರವಸ್ತ್ರದಲ್ಲಿ ಕಟ್ಟಿ ಬ್ಯಾಗಿನಲ್ಲಿಟ್ಟು ಕೆಲಸ ಮಾಡುತ್ತಿದ್ದು, ನಂತರ ಕೆಲಸ ಮುಗಿಸಿ ಸಂಜೆ 6:00 ಗಂಟೆಗೆ ಬ್ಯಾಗಿನಲ್ಲಿ ನೋಡಿದಾಗ ಬ್ಯಾಗಿನಲ್ಲಿಟ್ಟಿದ್ದ ಕರಿಮಣಿ ಸರ ಇಲ್ಲದೇ ಇದ್ದು, ಅದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಕರಿಮಣಿ ಸರದ  ಮೌಲ್ಯ ರೂಪಾಯಿ 1,44,700/- ಆಗಿರುತ್ತದೆ ಎಂದು ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.

error: No Copying!