ಉಡುಪಿ: ಜುಲೈ 5( ಹಾಯ್ ಉಡುಪಿ ನ್ಯೂಸ್) ಶಿರ್ವದ ವ್ಯಕ್ತಿ ಉಡುಪಿಗೆ ಬಂದವರು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.
ಸುಜಾತ ರಾವ್, (40) ,ಗಂಡ:ಶಿವರಾಯ ರಾವ್, ಮಾನಸ ಶಾಲೆ ಬಳಿ,ಪಾಂಬೂರು, ಶಿರ್ವ ಗ್ರಾಮ, ಕಾಪು ಇವರು ಕೂಲಿ ಕೆಲಸ ಮಾಡಿಕೊಂಡಿದ್ದು, ಗಂಡ ಹಾಗೂ ತಂದೆ ಲಕ್ಷ್ಮಣ್ ರಾವ್ (66) ಎಂಬವರೊಂದಿಗೆ ವಾಸಮಾಡಿಕೊಂಡಿದ್ದು, ದಿನಾಂಕ 04/07/2022 ರಂದು ಬೆಳಿಗ್ಗೆ 09:30 ಗಂಟೆಗೆ ಮನೆಯಿಂದ ಉಡುಪಿ ಗೆ ಸುಜಾತ ರಾವ್ ರವರ ಗಂಡ ಹಾಗೂ ತಂದೆ ಲಕ್ಷ್ಮಣ್ ರಾವ್ ಬಸ್ಸಿನಲ್ಲಿ ತೆರಳಿದ್ದು ,ಕೆ.ಎಂ.ಮಾರ್ಗದ ಬಳಿ ಬಸ್ಸಿನಿಂದ ಇಳಿದಿದ್ದು, ಶಿವರಾಯ ರಾವ್‌ರವರು ಲಕ್ಷ್ಮಣ ರಾವ್‌ರವರನ್ನು ಅಲ್ಲಿಯೇ ನಿಲ್ಲಲು ಹೇಳಿ ರಾಧಾ ಮೆಡಿಕಲ್‌ಗೆ ಹೋಗಿ ಔಷಧಿಯನ್ನು ತೆಗೆದುಕೊಂಡು ವಾಪಾಸು 10:45 ಗಂಟೆ ಸಮಯಕ್ಕೆ ಹಿಂತಿರುಗಿ ಬಂದು ನೋಡಿದಾಗ ಲಕ್ಷ್ಮಣ ರಾವ್‌ರವರು ಅಲ್ಲಿರಲಿಲ್ಲವೆಂದೂ, ಈವರೆಗೂ ಮನೆಗೂ ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಕಾಣೆಯಾದ ಲಕ್ಷ್ಮಣ ರಾವ್‌ರವರನ್ನು ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಸಿಗದೇ ಇದ್ದುದರಿಂದ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿರುತ್ತಾರೆ.ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.