ಉಡುಪಿ: ಜುಲೈ ೩(ಹಾಯ್ ಉಡುಪಿ ನ್ಯೂಸ್) ಗುಜರಾತ್ ನಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಮಹಿಳೆಯೋರ್ವರ ಚಿನ್ನಾಭರಣ ಸುಲಿಗೆ ಮಾಡಿದ ಘಟನೆ ನಡೆದಿದೆ.
ಗುಜರಾತ್ ರಾಜ್ಯದ ,ಕಾಂದಾಲಿ ಆನಂದ , ಕ್ರಿಶ್ಚಿಯನ್ ಸ್ರ್ಟೀಟ್ ನಿವಾಸಿ ಶ್ರೀಮತಿ ಸ್ನೇಹ ಬಿನ್ ವಿತೂಶ್ ಕುಮಾರ್ ಪರ್ಮರ್ (40) ಅವರು ರೈಲುಗಾಡಿ ಸಂಖ್ಯೆ 19578ರ ಬಿ-2 ಸೀಟ್ ನಂ: 60 ರದರಲ್ಲಿ ತನ್ನ ಕುಟುಂಬದವರೊಂದಿಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದವರೆಗೆ ಪ್ರಯಾಣ ಮಾಡಿದ್ದು, ರೈಲು ಗಾಡಿಯು ದಿನಾಂಕ 09/05/2022 ರಂದು 2:15 ಗಂಟೆಗೆ ಉಡುಪಿ ರೈಲು ನಿಲ್ದಾಣ ಬಿಡುವಾಗ ಅವರು ಮಂಗಳೂರಿನಲ್ಲಿರುವ ತನ್ನ ಪತಿಯವರಿಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಎಷ್ಟು ಗಂಟೆಗೆ ಬರುವುದಾಗಿ ಪೋನ್‌ನಲ್ಲಿ ವಿಚಾರಿಸುತ್ತಿರುವಾಗ ಅವರ ಬಳಿ ಒಬ್ಬ ಅಪರಿಚಿತ ಗಂಡಸು ಕೆಂಪು ಬಣ್ಣದ ಗೆರೆ ಇರುವ ಶರ್ಟ್ ಧರಿಸಿದ್ದವನು ಏಕಾಏಕಿ ಬಂದು ಅವರ ಬಳಿಯಿದ್ದ ವ್ಯಾನಿಟಿ ಬ್ಯಾಗನ್ನು ಕಿತ್ತುಕೊಂಡು ಓಡಿಹೋಗಿದ್ದು, ಸ್ನೇಹ ಬಿನ್ ರವರು ವ್ಯಾನಿಟಿ ಬ್ಯಾಗನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಆತನು ಎಳೆದ ರಭಸಕ್ಕೆ ವ್ಯಾನಿಟಿ ಬ್ಯಾಗ್‌ನ ಕೈ ಕಿತ್ತುಕೊಂಡು ಬಂದಿರುತ್ತದೆ. ದುಷ್ಕರ್ಮಿಯು ಬಲವಂತವಾಗಿ ಕಿತ್ತುಕೊಂಡು ಹೋದ ವ್ಯಾನಿಟಿ ಬ್ಯಾಗ್‌ನಲ್ಲಿ ಸ್ನೇಹ ಬಿನ್ ರವರ 25,000/- ಬೆಲೆಯ ಚಿನ್ನದ ರಿಂಗ್, 20,000/- ಬೆಲೆಯ ಚಿನ್ನದ ಕಿವಿ ಓಲೆ ಹಾಗೂ ನಗದು 8000/- ಇದ್ದು, ಒಟ್ಟು ಮೌಲ್ಯ 53,000/- ರೂಪಾಯಿಯಾಗಿರುವುದಾಗಿ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಸ್ಥಳದ ಆಧಾರದ ಮೇರೆಗೆ ನ್ಯಾಯಾಲಯದ ಆದೇಶದಂತೆ ಪ್ರಕರಣವನ್ನು ಉಡುಪಿ ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.