ಕೋಟ: ದಿನಾಂಕ :29-11-2026(ಹಾಯ್ ಉಡುಪಿ ನ್ಯೂಸ್) ಹೊಟೇಲ್ ಮುಂದೆ ಕೆಲ ಸೆಕೆಂಡುಗಳ ಕಾಲ ಕಾರು ನಿಲ್ಲಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನೊಬ್ಬ ಕಾರಿಗೆ ಅಡ್ಡಲಾಗಿ ಆಟೋ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವುದಾಗಿ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಜೂರು ಗ್ರಾಮದ ಕಲ್ಪವೃಕ್ಷ ನಿವಾಸದ ಗುರುರಾಜ ಪೂಜಾರಿ ಅವರು ನ. 28ರಂದು ರಾತ್ರಿ ಸುಮಾರು 8:02ರ ವೇಳೆಗೆ ಕುಟುಂಬದ ಸದಸ್ಯರೊಂದಿಗೆ ಬ್ರಹ್ಮಾವರ ತಾಲೂಕಿನ ಗಿಳಿಯಾರು ಗ್ರಾಮದ ಕೋಟ ಅಮೃತೇಶ್ವರಿ ದೇವಸ್ಥಾನದ ಬಳಿ ಇರುವ ಲತಾ ಹೊಟೇಲ್ಗೆ ಲಘು ಉಪಾಹಾರ ಸೇವಿಸಲು ತೆರಳಿದ್ದರು.
ಈ ವೇಳೆ ಹೊಟೇಲ್ ಮುಂಭಾಗದಲ್ಲಿ ಲಾರಿಯಿಂದ ಸಾಮಗ್ರಿಗಳನ್ನು ಇಳಿಸುವ ಕಾರ್ಯ ನಡೆಯುತ್ತಿದ್ದ ಕಾರಣ ಗುರುರಾಜ ಪೂಜಾರಿ ಅವರು ತಮ್ಮ ಕಾರನ್ನು ಸುಮಾರು 30 ಸೆಕೆಂಡುಗಳ ಕಾಲ ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಕಾರಿನ ಹಿಂಭಾಗದಲ್ಲಿದ್ದ KA-20-D-0739 ನೋಂದಣಿ ಸಂಖ್ಯೆಯ ಆಟೋ ರಿಕ್ಷಾ ಚಾಲಕ ಏಕಾಏಕಿ ರಿಕ್ಷಾವನ್ನು ಕಾರಿನ ಮುಂಭಾಗಕ್ಕೆ ತಂದು ಅಡ್ಡವಾಗಿ ನಿಲ್ಲಿಸಿ, ಕಾರು ಮುಂದಕ್ಕೆ ಚಲಿಸದಂತೆ ತಡೆದಿದ್ದಾನೆ ಎನ್ನಲಾಗಿದೆ.

ಅಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 189/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 126(2), 352 ಹಾಗೂ 351(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.