images-1.jpeg
Spread the love

ಕಾರ್ಕಳ: ದಿನಾಂಕ:28-11-2026(ಹಾಯ್ ಉಡುಪಿ ನ್ಯೂಸ್) ಉಡುಪಿಯ ಕರಾವಳಿ ಬೈಪಾಸ್ ನಿವಾಸಿ ಎಲಿಜಬೆತ್ (45) ಅವರ ಪತಿ ಸಂತೋಷ ನಾಯಕ್ (46) ಅವರು ಕಾರ್ಕಳದ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರಿರುವುದಾಗಿ 17/10/2026 ರಂದು ಸಂಜೆ 4:55 ಗಂಟೆಗೆ ಮಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಮನೆಗೂ ಹಿಂದಿರುಗದೆ ಹಾಗೂ ಸಂಬಂಧಿಕರ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 149/2026ರಂತೆ ಗಂಡಸು ಕಾಣೆಯಾದ ಪ್ರಕರಣ ದಾಖಲಾಗಿದೆ.
ಬೈಂದೂರು: ತಗ್ಗರ್ಸೆ ಗ್ರಾಮದ ಸುರೇಶ ಚಂದನ (46) ಅವರ ತಂದೆ ಲಕ್ಷ್ಮಣ (75) ಅವರು 27/11/2026 ರಂದು ಸಂಜೆ 6 ಗಂಟೆಗೆ ಉಪ್ಪುಂದದ ಜಾತ್ರೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದರು. ಆದರೆ ಅವರು ಮನೆಗೆ ಹಿಂದಿರುಗದೆ ಹಾಗೂ ಸಂಬಂಧಿಕರ ಮನೆಗೂ ತೆರಳದೆ ನಾಪತ್ತೆಯಾಗಿದ್ದಾರೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 176/2026ರಂತೆ ಗಂಡಸು ಕಾಣೆಯಾದ ಪ್ರಕರಣ ದಾಖಲಾಗಿದೆ.
ಎರಡೂ ಪ್ರಕರಣಗಳ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

error: No Copying!