ಉಡುಪಿ: ದಿನಾಂಕ:28-11-2026( ಹಾಯ್ ಉಡುಪಿ ನ್ಯೂಸ್) ನಗರದ ಬೀಡಿನಗುಡ್ಡೆ ಪರಿಸರವನ್ನು ಕಸದಿಂದ ಮುಕ್ತ ಗೊಳಿಸಬೇಕೆಂದು ನಗರಸಭಾ ಸದಸ್ಯ ಶ್ರೀ ಮೊಹಮ್ಮದ್ ರವರು ಅವಿರತವಾಗಿ ಶ್ರಮಿಸುತ್ತಿದ್ದು ಈ ಅಭಿಯಾನದ ಅಂಗವಾಗಿ ಬೀಡಿನ ಗುಡ್ಡೆ ಕ್ರೀಡಾಂಗಣದ ಹಿಂಬದಿ ರಸ್ತೆಯನ್ನು ಕಸ ಮುಕ್ತ ಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಗರದ ಒಳಕಾಡು ವಾರ್ಡಿನ ಬೀಡಿನಗುಡ್ಡೆ ಮಹಾತ್ಮಾಗಾಂಧಿ ಕ್ರೀಡಾಂಗಣದ ಹಿಂಬದಿಯಿಂದ ರಸ್ತೆಯ ಪೌರಾಕಾರ್ಮಿಕರ ಕಾಲೋನಿ ಸಂಪರ್ಕಿಸುವ ರಸ್ತೆಯ ಹತ್ತಿರದಲ್ಲಿ ಬ್ಲ್ಯಾಕ್ ಸ್ಪಾಟ್ ಎಂದು ಗುರುತಿಸಲಾಗಿತ್ತು.ಇಲ್ಲಿ ಕಸದ ಉತ್ಪತ್ತಿ ಹೆಚ್ಚುತ್ತಿದ್ದು ಸಾರ್ವಜನಿಕರು ಇದರಿಂದ ತೊಂದರೆಯನ್ನು ಅನುಭವಿಸುತಿದ್ದರು.
ಇದನ್ನು ಗಮನಿಸಿದ ಸಿಟಿ ವಿಭಾಗದ ಕಮ್ಯೂನಿಟಿ ಮೊಬಿಲೈ ಸರ್ ಗಳು ಹಾಗೂ ಸ್ಥಳೀಯ ನಗರ ಸಭಾ ಸದಸ್ಯರಾದ ಶ್ರೀ ಮೊಹಮ್ಮದ್ ರವರು ಆ ಬ್ಲ್ಯಾಕ್ ಸ್ಪಾಟ ನ್ನು ನಿರ್ಮೂಲನೆ ಮಾಡಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಹಾಗೂ ನಗರಸಭೆಯ ಸಹಕಾರದೊಂದಿಗೆ ಸುಂದರ ಗಾರ್ಡನನ್ನು ನಿರ್ಮಾಣ ಮಾಡಿದ್ದಾರೆ .
ದಿನಾಂಕ: 26-11-2026 ರಂದು ಈ ಗಾರ್ಡನ್ ಉದ್ಘಾಟನೆಯನ್ನು ನಗರಸಭೆಯ ಮಾನ್ಯ ಪೌರಾಯುಕ್ತರು ಮಹಾಂತೇಶ ಹಂಗರಗಿ ರವರು ನೆರವೇರಿಸಿದರು .ಈ ಸಂದರ್ಭದಲ್ಲಿ ಪರಿಸರ ಅಭಿಯಂತರರು, ಆರೋಗ್ಯಾಧಿಕಾರಿಗಳು , ಸೂಪರ್ ವೈಸರ್ ಗಳು, ವಾರ್ಡಿನ ನಗರಸಭಾ ಸದಸ್ಯರು ಮತ್ತು ಊರಿನ ಮುಖಂಡರು ಹಾಗೂ ಮಲ್ಪೆ ಮತ್ತು ಮಣಿಪಾಲದ ಕಮ್ಯೂನಿಟಿ ಮೊಬಿಲೈ ಸರ್ ಗಳು ಉಪಸ್ಥಿತರಿದ್ದರು.
