IMG_20261117_201426.png
Spread the love

ಮಣಿಪಾಲ: ದಿನಾಂಕ :17-11-2026(ಹಾಯ್ ಉಡುಪಿ ನ್ಯೂಸ್) ಕರ್ಕಶ ಶಬ್ದ ದ ಸೈಲೆನ್ಸರ್ ಅಳವಡಿಸಿ ಅತಿಯಾದ ವೇಗದಲ್ಲಿ ಕಾರನ್ನು ಚಲಾಯಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಕಾರು ಚಾಲಕನ ಮೇಲೆ ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಗಣೇಶ ದೇವಾಡಿಗ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಗಣೇಶ ದೇವಾಡಿಗ ಅವರು  ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಸೊಷಿಯಲ್‌ ಮಿಡೀಯಾ ಮಾನಿಟರಿಂಗ್‌ ಮಾಡುತ್ತಿರುವಾಗ ದಿನಾಂಕ:17.11.2026 ರಂದು  ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ವೊಂದನ್ನು ನೋಡಿದಾಗ KA 19 MK 8393 ನೇ ನೋಂದಣಿ ಸಂಖ್ಯೆಯ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡುತ್ತಾ ವಾಹನದ ಸೈಲೆನ್ಸರ್‌ ಅನ್ನು ಬದಲಾಯಿಸಿಕೊಂಡು ಅತಿಯಾದ ಕರ್ಕಶ ಶಬ್ದದೊಂದಿಗೆ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ತನ್ನ ವಾಹನವನ್ನು ಚಾಲನೆ ಮಾಡುತ್ತಿದ್ದು ವಾಹನದ ನಂಬ್ರ ನೋಡಿದಾಗ KA19MK8393 ನೋಂದಣಿ ಸಂಖ್ಯೆಯ ಬಿಳಿ ಬಣ್ಣದ ಕಾರಾಗಿರುತ್ತದೆ .

ಪೊಲೀಸರು ಈ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ  ಕಾರು ಪ್ರತಿದಿನ ಅತಿಯಾದ ಕರ್ಕಶ ಶಬ್ದ ಹಾಗೂ ಕಣ್ಣು ಕುಕ್ಕುವ ಲೈಟ್‌ಗಳೊಂದಿಗೆ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷದಿಂದ ಚಲಿಸುತ್ತಾ ಸಾರ್ವಜನಿಕರಿಗೆ ಉಪಟಳ ಉಂಟುಮಾಡುತ್ತಿರುತ್ತದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ  ಅಪರಾಧ ಕ್ರಮಾಂಕ:186/2026 ಕಲಂ: 281, 292 BNS &190(2) IMV ACT ರಂತೆ ಪ್ರಕರಣ ದಾಖಲಾಗಿದೆ.

error: No Copying!