ಬೆಂಗಳೂರು: ದಿನಾಂಕ:15-11-2026(ಹಾಯ್ ಉಡುಪಿ ನ್ಯೂಸ್) ಬೆಂಗಳೂರಿನ ಭಾರತಿನಗರದಲ್ಲಿ ಸಚಿವರಾದ ಶ್ರೀ ರಿಜ಼್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಭಾರತಿನಗರ ಹಬ್ಬದಲ್ಲಿ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಪಾಲ್ಗೊಂಡರು.

ಅತ್ಯಾಧುನಿಕ ಟೆಕ್ನೋಜಿಮ್ ಹಾಗೂ ಸುಸಜ್ಜಿತ ಬ್ಯಾಡ್ಮಿಂಟನ್ ಕೋರ್ಟ್ ಸೌಲಭ್ಯಗಳನ್ನು ಒಳಗೊಂಡ ನೂತನ ಸಮುದಾಯ ಭವನವನ್ನು ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಕೃಷ್ಣಬೈರೇಗೌಡ ಅವರು ಉಪಸ್ಥಿತರಿದ್ದರು.


ಆ ನಂತರ ಮಾತನಾಡಿದ ಮುಖ್ಯಮಂತ್ರಿಗಳು ಸ್ಥಳೀಯ ಯುವಜನತೆ ಮತ್ತು ಸಾರ್ವಜನಿಕರ ದೈಹಿಕ ಆರೋಗ್ಯ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಅತ್ಯುತ್ತಮ ಸೌಲಭ್ಯವು ಬಹಳ ಉಪಯುಕ್ತವಾಗಲಿದೆ. ಈ ಸಮುದಾಯ ಭವನವು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿ ಎಂದು ತಮ್ಮ ಭಾಷಣದಲ್ಲಿ ಹಾರೈಸಿದರು..




