ಹಿರಿಯಡ್ಕ: ದಿನಾಂಕ:13-11-2026(ಹಾಯ್ ಉಡುಪಿ ನ್ಯೂಸ್) ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರೋರ್ವರ ಪ್ರಶಸ್ತಿ ಫಲಕವನ್ನು ಯಾರೋ ಕಳ್ಳತನ ನಡೆಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .
ಬ್ರಹ್ಮಾವರ ಹಳೆ ದೊಡ್ಡ ಮನೆ, ಬೆನಗಲ್ ನಿವಾಸಿ ಸಿ ಮಂಜುನಾಥ ಪ್ರಭು (77) ಎಂಬವರು ಯಕ್ಷಗಾನದ ಕಲಾವಿದರಾಗಿದ್ದು, ಕರ್ನಾಟಕ ಸರ್ಕಾರವು 2024 ನವೆಂಬರ್ 1 ರಂದು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಫಲಕದೊಂದಿಗೆ ನೀಡಿ ಗೌರವಿಸಿದ್ದು, ಅವರು ಕುಕ್ಕೆಹಳ್ಳಿ ಗ್ರಾಮದ ಸುಜಾತ ಕುಲಾಲ ಎಂಬವರ ಬಾಡಿಗೆ ಮನೆಯಲ್ಲಿರುವ ಸಮಯ ಸಿ ಮಂಜುನಾಥ ಪ್ರಭು ರವರು ಆ ಪ್ರಶಸ್ತಿ ಫಲಕವನ್ನು ಒಂದು ಕೈ ಚೀಲದಲ್ಲಿ ಹಾಕಿ ಮಲಗುತ್ತಿದ್ದರು .
ದಿನಾಂಕ 20-09-2026 ರಂದು ಆ ಪ್ರಶಸ್ತಿ ಫಲಕವನ್ನು ನೋಡಿ ಪುನ: ಅದೇ ಚೀಲದಲ್ಲಿ ಇಟ್ಟಿದ್ದು, ದಿನಾಂಕ 15-10-2026 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ಮಂಜುನಾಥ ಪ್ರಭು ರವರು ಯಕ್ಷಗಾನದ ಸಾಮಾಗ್ರಿ ಹಾಗೂ ಬಟ್ಟೆಗಳನ್ನು ಸರಿಪಡಿಸಲು ಹೋದ ಸಮಯದಲ್ಲಿ ಪ್ರಶಸ್ತಿ ಫಲಕ ಕಾಣದೆ ಇದ್ದು ಎಲ್ಲಾದರೂ ಸಿಗಬಹುದೆಂದು ಸುಮ್ಮನಿದ್ದು ಆದರೆ ಈ ದಿನದವರೆಗೆ ಪ್ರಶಸ್ತಿ ಫಲಕ ಸಿಗದೆ ಇದ್ದು, ಪ್ರಶಸ್ತಿ ಫಲಕದಲ್ಲಿ ಬಂಗಾರದ ಲೇಪನದ ಪ್ಲೇಟ್ ಇದ್ದು ಅದರ ಅಂದಾಜು ಮೌಲ್ಯ ರೂ 25000/- ಆಗಿರಬಹುದು,ಅದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಮಂಜುನಾಥ ಪ್ರಭು ರವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 64/2026 U/S ,305(a) BNS ರಂತೆ ಪ್ರಕರಣ ದಾಖಲಾಗಿದೆ.
