IMG_20261030_210845.jpg
Spread the love

ಉಡುಪಿ: ದಿನಾಂಕ:30-10-2026(ಹಾಯ್ ಉಡುಪಿ ನ್ಯೂಸ್) ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದ  ಪ್ರಕರಣವೊಂದರಲ್ಲಿ ತನಿಖೆ ಎದುರಿಸುತ್ತಿರುವ ಆರೋಪಿಯೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಗಲೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ನಗರದ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ  ಪ್ರಕರಣವೊಂದರಲ್ಲಿ ತನಿಖೆ ಎದುರಿಸುತ್ತಿರುವ ಯುವಕನೋರ್ವ ನನ್ನು ಅನಾರೋಗ್ಯದ ಕಾರಣದಿಂದ ಚಿಕಿತ್ಸೆಗಾಗಿ ಪೊಲೀಸರು ದಾಖಲು ಮಾಡಿದ್ದಾರೆ ಎನ್ನಲಾಗಿದೆ.

ಚಿಕಿತ್ಸೆ ಪಡೆಯುತ್ತಿದ್ದ ಯುವಕ ವಾರ್ಡ್ ನಲ್ಲಿ ಶೌಚ ಮಾಡಲೆಂದು ಶೌಚಾಲಯಕ್ಕೆ ತೆರಳಿದವನು ತನ್ನ ನೈಟ್ ಪ್ಯಾಂಟ್ ನ ದಾರವನ್ನು ಕಿಟಕಿಗೆ ಕಟ್ಟಿ ಅದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಶವವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

error: No Copying!