IMG-20261029-WA0094.jpg
Spread the love

ಕೋಲಾರ: ದಿನಾಂಕ:29-10-2026(ಹಾಯ್ ಉಡುಪಿ ನ್ಯೂಸ್) ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲೂಕಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 28 ವರ್ಷದ ಶ್ವೇತಾ ಅವರು ಆಕಸ್ಮಿಕ ಅಪಘಾತದಲ್ಲಿ ಗಂಭೀರಗಾಯಗೊಂಡು, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರಿಗೆ ಬ್ರೈನ್ ಡೆತ್ (ಮೆದುಳು ನಿಷ್ಕ್ರಿಯ) ಆಗಿರುವುದಾಗಿ ವೈದ್ಯರು ಮುಂಜಾನೆ ದೃಢಪಡಿಸಿದರು.

ಅಪಾರ ದುಃಖ ಹಾಗೂ ನೋವಿನಲ್ಲೂ ಶ್ವೇತಾ ಅವರ ಕುಟುಂಬದವರು ತೋರಿದ ಮುಖಂಡತ್ವ ಮತ್ತು ಮಾನವೀಯತೆ ನಿಜಕ್ಕೂ ಅನುಕರಣೀಯವಾಗಿದೆ. ತಮ್ಮ ಮಗಳ ಅಗಲಿಕೆಯಲ್ಲೂ ಇತರರಿಗೆ ಮರುಜೀವ ನೀಡುವ ಮಹತ್ತರ ಉದ್ದೇಶದಿಂದ ಕುಟುಂಬಸ್ಥರು ಸ್ವಯಂಪ್ರೇರಿತರಾಗಿ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದರು.

ಶ್ವೇತಾ ಅವರ ಯಕೃತ್ (ಲಿವರ್) ಹಾಗೂ ಹೃದಯದ ಕವಾಟಗಳನ್ನು ದಾನ ಮಾಡುವ ಮೂಲಕ ಇಬ್ಬರು ರೋಗಿಗಳ ಬಾಳಿನಲ್ಲಿ ಹೊಸ ಬೆಳಕು ಮೂಡಿಸಲಾಗಿದೆ. ಈ ಕಷ್ಟದ ಕಾಲದಲ್ಲಿ ಉದಾತ್ತ ನಿರ್ಧಾರ ಕೈಗೊಂಡ ಶ್ವೇತಾ ಅವರ ಕುಟುಂಬದವರಿಗೆ ರಾಜ್ಯ ಸರ್ಕಾರದ ಹಾಗೂ ಸಾರ್ವಜನಿಕರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ. ಈ ಸಂಪೂರ್ಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ‘ಜೀವಸಾರ್ಥಕತೆ’ (SOTTO) ತಂಡದ ಸೇವೆ ಅತ್ಯಂತ ಶ್ಲಾಘನೀಯವಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ನೊಂದ ಕುಟುಂಬಕ್ಕೆ ಕ್ರತಜ್ನತೆ ಸಲ್ಲಿಸಿದ್ದಾರೆ.

error: No Copying!