IMG_20261026_234906.png
Spread the love

ಮಣಿಪಾಲ: ದಿನಾಂಕ 26/10/2026 (ಹಾಯ್ ಉಡುಪಿ ನ್ಯೂಸ್) ಮಣಿಪಾಲ -ಪೆರಂಪಳ್ಳಿ ರಸ್ತೆಯಲ್ಲಿರುವ ಪ್ಲಾನೆಟ್ ಕೆಫೆ ಎಂಬ ಹೋಟೆಲಿನಲ್ಲಿ ತಡ ರಾತ್ರಿ ವ್ಯವಹಾರ ನಡೆಯುತ್ತಿದ್ದ ಬಗ್ಗೆ ದೂರಿನ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶಂಭುಲಿಂಗಯ್ಯ ಎಂ.ಇ ಅವರು ದಿನಾಂಕ:26-10-2026 ರಂದು ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿ ಇರುವಾಗ ದಿನಾಂಕ 26/10/2026 ರಂದು 02:15 ಗಂಟೆಗೆ ಶಿವಳ್ಳಿ ಗ್ರಾಮದ ಮಣಿಪಾಲ ಪೆರಂಪಳ್ಳಿ ರಸ್ತೆಯಲ್ಲಿರುವ PLANET CAFE ಎಂಬ ಹೆಸರಿನ ಹೋಟೆಲಿನವರು ಅವಧಿ ಮೀರಿ ಹೋಟೆಲ್‌ ನಲ್ಲಿ ಗಿರಾಕಿಗಳಿಗೆ ಸರ್ವಿಸ್‌ ಮತ್ತು ಪಾರ್ಸೆಲ್‌ ನೀಡುತ್ತಿದ್ದು ಇದರಿಂದ ಉಡುಪಿಯ ವಿವಿಧ ಪರಿಸರದಿಂದ ಸಾರ್ವಜನಿಕರು ಇಲ್ಲಿ ಬಂದು ಈ ಸ್ಥಳದಲ್ಲಿ ಜಮಾಯಿಸುವುದರಿಂದ ಅಲ್ಲಿಯ ಪರಿಸರದಲ್ಲಿ ವಾಸವಿರುವ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬುವುದಾಗಿ ಸಾರ್ವಜನಿಕ ಮಾಹಿತಿ ಬಂದ ಮೇರೆಗೆ ರಾತ್ರಿ ಗಸ್ತು ಕರ್ತವ್ಯದಲ್ಲಿ ಇದ್ದ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಹೋದಾಗ ಹೋಟೆಲ್‌ ನ ಸೂಪರ್ವೈಸರ್‌ ಮಹಮ್ಮದ್‌ ಅಶರ್‌ ಇದ್ದು ಅವರ ಬಳಿ ರಾತ್ರಿ ಪಾಳಿಯಲ್ಲಿ ಹೋಟೆಲ್‌ ವ್ಯಾಪಾರ ನಡೆಸುವ ಬಗ್ಗೆ ಯಾವುದಾದರೂ ಪರವಾನಗಿ ಇದೆಯೇ ಎಂದು ಕೇಳಿದಾಗ ಅವರು ತಮ್ಮ ಬಳಿ ಯಾವುದೇ ಪರವಾನಗಿ ಇರುವುದಿಲ್ಲ ಎಂಬುದಾಗಿ ತಿಳಿಸಿದ್ದು PLANET CAFÉ ಹೋಟೆಲ್‌ ನ ಮಾಲಿಕರಿಗೆ ಈಗಾಗಲೇ ಹಲವಾರು ಬಾರಿ ಮೌಖಿಕವಾಗಿ ಹೊಟೇಲನ್ನು ಸರಿಯಾದ ಸಮಯಕ್ಕೆ ಬಂದ್ ಮಾಡಲು ತಿಳಿಸಿದ್ದರೂ ಸಹ ಹೋಟೇಲ್ ಮಾಲಿಕರು ಯಾವುದೇ ಪರವಾನಿಗೆ ಪಡೆಯದೇ ಅವಧಿ ಮೀರಿ ಹೋಟೇಲನ್ನು ಕಾರ್ಯಾಚರಣೆ ಮಾಡಿರುವುದರಿಂದ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟು ಮಾಡಿ, ಸಾರ್ವಜನಿಕ ಉಪದ್ರವಕ್ಕೆ ಕಾರಣರಾಗಿರುವುದರಿಂದ ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 176/2026 ಕಲಂ: 292, 293 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!